ಪರೀಕ್ಷೆಗೂ ಮುನ್ನವೇ PUCಗೆ ಅಡ್ಮಿಷನ್ : ಖಾಸಗಿ ಕಾಲೇಜುಗಳಲ್ಲಿ ದಂಧೆ ..! ದಾವಣಗೆರೆ (ಜೂ.12):ಎಸ್‌ಎಸ್‌ಎಲ್‌ಸಿಪರೀಕ್ಷೆ ನಡೆದು ಫಲಿತಾಂಶ ಬಂದಿಲ್ಲ. ಆದರೂ ಅಡ್ಮಿಷನ್ ಆರಂಭವಾಗಿದೆ. ಎಸ್ಸೆಸ್ಸೆಲ್ಸಿ, ಪಿಯು-1 ಅಂಕಪಟ್ಟಿ ದೃಢೀಕರಿಸಲು ಡಿಡಿಪಿಯುಗೆ ಸೂಚನೆ ... ಪರೀಕ್ಷೆಗೂ ಮುನ್ನವೇ ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದೆ ಖಾಸಗಿ ಕಾಲೇಜುಗಳು ಅಡ್ಮಿಷನ್ ಮಾಡುತ್ತಿವೆ. ದಾವಣಗೆರೆ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿದೆ ಅಡ್ಮಿಷನ್ ದಂಧೆ. " ದಾವಣಗೆರೆಯ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಪಿಯುಸಿಗೆ ಅಡ್ಮಿಷನ್ ಮಾಡಿಕೊಂಡು ಆನ್‌ಲೈನ್ ತರಗತಿಗಳನ್ನು ಆರಂಭ ಮಾಡಿವೆ. ಇದಕ್ಕಾಗಿ ಇಲ್ಲಿನ ಅನೇಕ ಪೋಷಕರು ತಮ್ಮ ಮಕ್ಕಳ ಅಡ್ಮಿಷನ್‌ಗಾಗಿ ಕಾಲೇಜುಗಳಿಗೆ ಅಲೆಯುವಂತಾಗಿದೆ.