ಪರೀಕ್ಷೆ ಮುಂದೂಡಿಕೆ: ಅಧಿಕೃತವಾಗಿ ಘೋಷಿಸಿದ ಶಿಕ್ಷಣ ಸಚಿವ ದೇಶಾದ್ಯಂತ ಕೊರೋನ ಸೋಂಕು ಮತ್ತೆ ಮಿತಿಮೀರುತ್ತಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮತ್ತೆ ಪರೀಕ್ಷೆಗಳು ಮುಂದೂಡಲ್ಪಡುತ್ತಿದ್ದು, ಇದೀಗ ಈ ಸಾಲಿಗೆ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ () ಯೂ ಸೇರಿದೆ. ನವದೆಹಲಿ, (ಏ.18):ಜಂಟಿ ಪ್ರವೇಶ ಮುಖ್ಯ ಪರೀಕ್ಷೆ () ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಲ್ಪಟ್ಟಿದ್ದನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಕೂಡ ದೃಢಪಡಿಸಿದ್ದಾರೆ. ಸದ್ಯದ ಕೊವಿಡ್​-19 ಸ್ಥಿತಿಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡುವುದೇ ಒಳಿತು ಎಂದು ನಾನೂ ಸಹ ಎನ್​ಟಿಎಗೆ ಸಲಹೆ ನೀಡಿದ್ದೆ. ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಅವರ ಸುರಕ್ಷತೆ ನನ್ನ ಮತ್ತು ಶಿಕ್ಷಣ ಸಚಿವಾಲಯದ ಮೊದಲ ಆದ್ಯತೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. 1 ರಿಂದ 9 ನೇ ತರಗತಿ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್ ಏಪ್ರಿಲ್​ 27ರಿಂದ 30ರವರೆಗೆ ನಡೆಯಲಿದ್ದ ಮುಖ್ಯ ಪರೀಕ್ಷೆ(2021)ಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ () ಮುಂದೂಡಿದೆ. ಸದ್ಯಕ್ಕೇನೂ ಪರೀಕ್ಷೆಯ ಹೊಸ ದಿನಾಂಕವನ್ನು ಘೋಷಣೆ ಮಾಡಿಲ್ಲ. ದೇಶದಲ್ಲಿ ಸದ್ಯದಲ್ಲಿರುವ ಕೊವಿಡ್​ 19 ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಪರೀಕ್ಷಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಏಪ್ರಿಲ್​ ಸೆಷನ್​​ನಲ್ಲಿ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎನ್​ಟಿಎ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಪರೀಕ್ಷೆ ನಡೆಸುವ 15 ದಿನಗಳ ಮೊದಲು ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಿದೆ. ಇನ್ನು ಜೆಇಇ ಮುಖ್ಯಪರೀಕ್ಷೆಯ ಫೆಬ್ರವರಿ ಮತ್ತು ಮಾರ್ಚ್​ ಸೆಷನ್​ಗಳು ಮುಕ್ತಾಯಗೊಂಡಿದ್ದು, ಏಪ್ರಿಲ್​ದು 27ರಿಂದ ಪ್ರಾರಂಭವಾಗಲಿತ್ತು. ಆದರೆ ಅದನ್ನು ಮುಂದೂಡಬೇಕು. ಕೊರೋನಾ ಸಮಯದಲ್ಲಿ ಪರೀಕ್ಷೆ ಬರೆಯುವುದು ಸುರಕ್ಷಿತವಲ್ಲ ಎಂದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಕೂಡ ಬೇಡಿಕೆ ಮುಂದಿಟ್ಟಿದ್ದರು. ಈ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದರು.