ದ್ವಿತೀಯ ಪಿಯುಸಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ: ಇಲ್ಲಿದೆ ಪರಿಷ್ಕೃತ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ. ಬೆಂಗಳೂರು, (ಮಾ.12):2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮೇ 24 ರಿಂದ ಜೂನ್​ 10ರ ತನಕ ನಡೆಸಲು ನಿರ್ಧರಿಸಿ ಈ ಹಿಂದೆ ಹೊರಡಿಸಲಾಗಿದ್ದ ವೇಳಾಪಟ್ಟಿಯನ್ನು ಕೊಂಚ ಬದಲಾವಣೆ ಮಾಡಲಾಗಿದೆ. ತಿದ್ದುಪಡಿಗೊಳಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಇಂದು (ಶುಕ್ರವಾರ೦ ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದಿನ ವೇಳಾಪಟ್ಟಿಗೆ ಹಲವು ಆಕ್ಷೇಪಣೆಗಳು ಬಂದಿದ್ದವು. ಅಧಿಕೃತ ಘೋಷಣೆ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಫೈನಲ್ ಈ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ನೀಡುತ್ತಿರುವುದಾಗಿ ಇಲಾಖೆ ತಿಳಿಸಿದೆ. ನೂತನ ವೇಳಾಪಟ್ಟಿಯ ಪ್ರಕಾರ 24-05-2021ರಿಂದ 16-06-2021ರ ತನಕ ಪರೀಕ್ಷೆಗಳು ನಡೆಯಲಿವೆ. ಪರಿಷ್ಕೃತ ವೇಳಾಪಟ್ಟಿಮೇ 24, ಸೋಮವಾರ: ಇತಿಹಾಸಮೇ 25, ಮಂಗಳವಾರ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತಮೇ 26, ಬುಧವಾರ: ಭೂಗೋಳಶಾಸ್ತ್ರಮೇ 27, ಗುರುವಾರ: ಮನಃಶಾಸ್ತ್ರ, ಬೇಸಿಕ್​ ಮ್ಯಾಥ್ಸ್​ಮೇ 28, ಶುಕ್ರವಾರ: ತರ್ಕಶಾಸ್ತ್ರಮೇ 29, ಶನಿವಾರ: ಕನ್ನಡಮೇ 31, ಸೋಮವಾರ: ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣಜೂನ್​ 1, ಮಂಗಳವಾರ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್​, ಹೆಲ್ತ್​ಕೇರ್​, ಬ್ಯೂಟಿ ಮತ್ತು ವೆಲ್​ನೆಸ್​ ()ಜೂನ್​ 2, ಬುಧವಾರ: ರಾಜ್ಯಶಾಸ್ತ್ರ, ಗಣಕ ವಿಜ್ಞಾನಜೂನ್​ 3, ಗುರುವಾರ: ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ಜೂನ್ 4, ಶುಕ್ರವಾರ: ಅರ್ಥಶಾಸ್ತ್ರಜೂನ್ 5, ಶನಿವಾರ: ಗೃಹವಿಜ್ಞಾನಜೂನ್​ 7, ಸೋಮವಾರ: ವ್ಯವಹಾರ ಅಧ್ಯಯನ, ಭೌತಶಾಸ್ತ್ರಜೂನ್ 8, ಮಂಗಳವಾರ: ಭೂಗರ್ಭಶಾಸ್ತ್ರಜೂನ್ 9, ಬುಧವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ಜೂನ್ 10, ಗುರುವಾರ: ಸಮಾಜಶಾಸ್ತ್ರ, ರಸಾಯನ ಶಾಸ್ತ್ರಜೂನ್ 11, ಶುಕ್ರವಾರ: ಉರ್ದು, ಸಂಸ್ಕೃತಜೂನ್ 12, ಶನಿವಾರ: ಸಂಖ್ಯಾಶಾಸ್ತ್ರಜೂನ್​ 14, ಸೋಮವಾರ: ಐಚ್ಛಿಕ ಕನ್ನಡಜೂನ್ 15, ಮಂಗಳವಾರ: ಹಿಂದಿಜೂನ್​ 16, ಬುಧವಾರ: ಇಂಗ್ಲೀಷ್