ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ 2021–22ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಯಾವಾಗ ಯಾವ ಪರೀಕ್ಷೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ. ಬೆಂಗಳೂರು, (ಜ.29):2021–22ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು (ಶುಕ್ರವಾರ) ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಪ್ರಕಟಿಸಿದರು. ತರಗತಿಗಳು ಪ್ರಾರಂಭ: ವಿದ್ಯಾರ್ಥಿ, ಪೋಷಕರಿಗೆ ಕೆಲ ಅಂಶಗಳನ್ನ ತಿಳಿಸಿದ ಸಚಿವರು ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ನಡುವೆ, ದಿನಾಂಕ ಬಗ್ಗೆ ಆಕ್ಷೆಪಣೆಗಳಿದ್ದರೆ ಸಲ್ಲಿಸಬಹುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ದ್ವಿತೀಯ ಪರೀಕ್ಷೆ ವೇಳಾಪಟ್ಟಿ ಹೀಗಿದೆ*. ಮೇ 24: ಭೌತಶಾಸ್ತ್ರ, ಇತಿಹಾಸ* ಮೇ 25: ಮೈನಾರಿಟಿ ಲಾಂಗ್​ವೇಜಸ್​* ಮೇ 26: ಲಾಜಿಕ್, ಹೋಮ್​ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ ಪರೀಕ್ಷೆ* ಮೇ 27: ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ* ಮೇ 28: ಉರ್ದು* ಮೇ 29: ಯಾವ ಪರೀಕ್ಷೆ ನಿಗದಿಯಾಗಿಲ್ಲ* ಮೇ 31: ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್* ಜೂ.1: ಕರ್ನಾಟಕ ಸಂಗೀತ* ಜೂ.2: ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್* ಜೂ.3: ಹಿಂದಿ* ಜೂ.4: ಎಕನಾಮಿಕ್ಸ್* ಜೂ.5: ಕನ್ನಡ* ಜೂ.7: ಇಂಗ್ಲಿಷ್*.ಜೂ.8: ಬ್ಯೂಟಿ & ವೆಲ್​ನೆಸ್​, ಹೆಲ್ತ್​ಕೇರ್, ರೀಟೇಲ್ ಆಟೋಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ*.ಜೂ.9: ಸಮಾಜ, ಸಂಖ್ಯಾ ಶಾಸ್ತ್ರ