ಗಾಯಾಳು ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರದ ಚೆಕ್‌ ನೀಡಿದ ಸಚಿವ ಸುರೇಶ್‌ ಕುಮಾರ್‌ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರ| ವಿದ್ಯಾರ್ಥಿನಿ ದಾಖಲಾಗಿರುವ ನಿಮ್ಹಾನ್ಸ್‌ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವರು| ಬಾಲಕಿಗೆ ನೆರವಾಗುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ| ಬೆಂಗಳೂರು(ಫೆ.03):ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗೆ ತೆರಳುವಾಗ ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಯಶಸ್ವಿನಿ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖಾ ಸಚಿವ ಎಸ್‌.ಸುರೇಶ್‌ ಕುಮಾರ್‌ 1 ಲಕ್ಷ ಸಹಾಯಧನದ ಚೆಕ್‌ ವಿತರಿಸಿದ್ದಾರೆ. ವಿದ್ಯಾರ್ಥಿನಿ ದಾಖಲಾಗಿರುವ ನಿಮ್ಹಾನ್ಸ್‌ಗೆ ಮಂಗಳವಾರ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವರು, ಸಹಾಯಧನದ ಚೆಕ್‌ ವಿತರಿಸಿ ಬಾಲಕಿಯ ಪೋಷಕರಿಗೆ ಸಮಾಧಾನ ಹೇಳಿದ್ದಾರೆ. ರಾಜ್ಯದಲ್ಲಿ ಈ ನಾಲ್ಕು ತರಗತಿಗಳು ಆರಂಭ? ಬಾಲಕಿಯ ತಂದೆ ಸೆಕ್ಯೂರಿಟಿ ಕೆಲಸ ಮಾಡುತ್ತಿದಾರೆ. ಹೀಗಾಗಿ ಬಾಲಕಿಗೆ ನೆರವಾಗುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಈ ವೇಳೆ ಸಚಿವರು ಸೂಚಿಸಿದರು. ಸಚಿವರಿಂದ ಮಾಹಿತಿ ಪಡೆದುಕೊಂಡಿದ್ದ ನಗರ ಸಂಚಾರ ಜಂಟಿ ಪೊಲೀಸ್‌ ಆಯುಕ್ತರು ಕೂಡ ಬಾಲಕಿಯ ಚಿಕಿತ್ಸೆಗೆ ಧನ ಸಹಾಯ ಮಾಡಿದ್ದಾರೆಂದು ಬಾಲಕಿಯ ತಂದೆ ತಿಳಿಸಿದರು.