ಸುದೀರ್ಘ ವಿಚಾರಣೆ ಬಳಿಕ 5,8,9, ನೇ ತರಗತಿಗಳ ಬೋರ್ಡ್ ಎಕ್ಸಾಂ ನಡೆಸಲು ಹೈಕೋರ್ಟ್ ಒಪ್ಪಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿದ್ದ ಬೋರ್ಡ್ ಎಕ್ಸಾಂಗೆ ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ಸೂಚಿಸಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಬೋರ್ಡ್ ಎಕ್ಸಾಂಗೆ ಅಸ್ತು ಎಂದಿದೆ. ಬೆಂಗಳೂರು (ಮಾ.22):ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿದ್ದ ಬೋರ್ಡ್ ಎಕ್ಸಾಂಗೆ ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ಸೂಚಿಸಿದೆ. ಬೋರ್ಡ್ ಎಕ್ಸಾಂ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠದ ಮೆಟ್ಟಲೇರಿತ್ತು. ಇದೀಗ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಬೋರ್ಡ್ ಎಕ್ಸಾಂಗೆ ಅಸ್ತು ಎಂದಿದೆ. ಉಳಿದ ವಿಷಯಗಳ ಪರೀಕ್ಷೆ ನಡೆಸಲು ತುರ್ತು ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ನ್ಯಾ.ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರಿಂದ ಈ ತೀರ್ಪು ಹೊರಬಿದ್ದಿದೆ. 11 ನೇ ತರಗತಿಯ ಎಲ್ಲಾ ಪರೀಕ್ಷೆಗಳು ಈಗಾಗಲೇ ಮುಗಿದಿವೆ. 5,8,9ನೇ ತರಗತಿಗಳಲ್ಲಿ ಕೂಡ ಎರಡು ವಿಷಯಗಳ ಪರೀಕ್ಷೆ ಮುಗಿದಿದೆ. ತೀರ್ಪು ಹಿನ್ನೆಲೆ ಉಳಿದ ವಿಷಯಗಳ ಪರೀಕ್ಷೆಗಳನ್ನ ಸೋಮವಾರದಿಂದ ಆರಂಭಗೊಳಿಸುವ ಸಾಧ್ಯತೆ ಇದೆ. ಪರೀಕ್ಷೆ ದಿನಾಂಕ ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಲಿದೆ. ರಾಜ್ಯದ 30 ಲಕ್ಷಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನ ನಿರ್ಧರಿಸುವ ತೀರ್ಪು ಇದಾಗಿತ್ತು. ಪಿಯು-2 ಪರೀಕ್ಷೆ ಪೂರ್ಣಕ್ಕೆ ಮೊದಲೇ ಮಾದರಿ ಉತ್ತರ ಪ್ರಕಟ..! ಏನಿದು ಮೌಲ್ಯಾಂಕನ ಗೊಂದಲ ಕೆಪಿಎಸ್‌ಸಿಯಿಂದ ಮುಂದುವರೆದ ವಿಳಂಬ ನೀತಿ, ಪರೀಕ್ಷೆ ಆಗಿ 2 ತಿಂಗಳಾದರೂ ಬಾರದ ಫಲಿತಾಂಶ! ಏನಿದು ಮೌಲ್ಯಾಂಕನ ಪರೀಕ್ಷೆ ಪರೀಕ್ಷಾ ಪ್ರಕ್ರಿಯೆ