ಫಲಿತಾಂಶ: ಚಿಕ್ಕಬಳ್ಳಾಪುರ ಫಸ್ಟ್, ಯಾದಗಿರಿ ಲಾಸ್ಟ್ ಕೊರೋನಾ ಭೀತಿ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಹಾಗಾದ್ರೆ, ಈ ಬಾರಿ ಫಸ್ಟ್ ಯಾವ ಜಿಲ್ಲೆ? ಯಾವ ಜಿಲ್ಲೆ ಲಾಸ್ಟ್..? ಬೆಂಗಳೂರು, (ಆ.10):ಕರ್ನಾಟಕ ಎಸ್‌ಎಸ್‌ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. " ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ. ಇನ್ನು ಜಿಲ್ಲಾವಾರು ನೋಡುವುದಾದ್ರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. ಯಾವ ಜಿಲ್ಲೆ ಎಷ್ಟನೇ ಸ್ಥಾನ... 1. ಚಿಕ್ಕಬಳ್ಳಾಪುರ2. ಬೆಂಗಳೂರು ಗ್ರಾಮಾಂತರ3. ಮಧುಗಿರಿ4. ಮಂಡ್ಯ5. ಚಿತ್ರದುರ್ಗ6. ಕೋಲಾರ7. ಉಡುಪಿ8. ರಾಮನಗರ9. ಹಾಸನ10.ಉತ್ತರ ಕನ್ನಡ11. ಚಾಮರಾಜನಗರ12. ಮಂಗಳೂರು (ದಕ್ಷಿಣ ಕನ್ನಡ)13. ಬಳ್ಳಾರಿ.14. ತುಮಕೂರು15. ಶಿರಸಿ16. ಬೆಂಗಳೂರು ಉತ್ತರ17. ದಾವಣಗೆರೆ18. ಕೊಡಗು19. ಶಿವಮೊಗ್ಗ20 ಚಿಕ್ಕಮಗಳೂರು21 ಮೈಸೂರು22 ಕಲಬುರಗಿ23 ಕೊಪ್ಪಳ24 ಬೀದರ್25 ವಿಜಯಪುರ26 ಬಾಗಲಕೋಟೆ27 ಧಾರವಾಡ28 ರಾಯಚೂರು29 ಬೆಂಗಳೂರು ದಕ್ಷಿಣ30 ಚಿಕ್ಕೋಡಿ31 ಬೆಳಗಾವಿ32 ಗದಗ33 ಹಾವೇರಿ34 ಯಾದಗಿರಿ