ಕಾಮೆಡ್ -ಕೆ ಯುಜಿಇಟಿ – 2020 ಪರೀಕ್ಷೆ ಮತ್ತೆ ಮುಂದೂಡಿಕೆ ಇದೇ ಆಗಸ್ಟ್ 1 ರಂದು ಮರು ನಿಗದಿಪಡಿಸಲಾಗಿದ್ದ ಕಾಮೆಡ್ -ಕೆ ಯುಜಿಇಟಿ – 2020 ಪರೀಕ್ಷೆ ಮತ್ತೆ ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರು, (ಜುಲೈ.18):ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟವು () 2020 ಪರೀಕ್ಷೆಯ ದಿನಾಂಕಗಳನ್ನು ಮತ್ತೆ ಮುಂದೂಡಿದೆ. ಈ ಮೊದಲು ಪರೀಕ್ಷೆಯನ್ನು ಆಗಸ್ಟ್ 1 ರಂದು ಮರು ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಸಿ ಕೊರೋನಾ ಲಸಿಕೆ ಮಾಡುತ್ತಾ ಕಮಾಲ್, ದುಬೈನಲ್ಲಿ ?ಜು.18ರ ಟಾಪ್ 10 ಸುದ್ದಿ! ಆರೋಗ್ಯದ ದೃಷ್ಟಿಯಿಂದ, ನಮ್ಮ ಸಹಾಯವಾಣಿ ಬಂದ್ ಆಗಿರುತ್ತದೆ. ಎಲ್ಲ ಪ್ರಶ್ನೆಗಳಿಗೆ ಇ-ಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು. ನಿಮ್ಮ ಪ್ರಶ್ನೆಗಳನ್ನು @. ಗೆ ತಿಳಿಸಿ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.