ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡುವುದೇಗೆ...? ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕಾಗಿ ಕೌಟ್‌ಡೌನ್ ಶುರುವಾಗಿದೆ. ಮತ್ತೊಂದೆಡೆ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ನವದೆಹಲಿ, (ಜು.13):ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು (ಸೋಮವಾರ) ಪ್ರಕಟಿಸಿದೆ. ವಿದ್ಯಾರ್ಥಿಗಳು .., .. ಹಾಗೂ .. ನಲ್ಲಿ ಫಲಿತಾಂಶ ಪರೀಕ್ಷಿಸಬಹುದು ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಈ ವರ್ಷದ ಪರೀಕ್ಷೆಯಲ್ಲಿ ಒಟ್ಟು 88.78 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ 5.38 ಶೇ. ಉತ್ತಮ ಫಲಿತಾಂಶ ಬಂದಿದೆ. ದ್ವಿತೀಯ ಪಿಯುಸಿ ರಿಸಲ್ಟ್‌ಗೆ‌ ಕೌಂಟ್‌ಡೌನ್ : ನಿರ್ಧಾರವಾಗಲಿದೆ 6.75 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಕಳೆದ ವರ್ಷ 83.40 ಶೇ. ಫಲಿತಾಂಶ ಬಂದಿತ್ತು.ಈ ವರ್ಷ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇ91.15ರಷ್ಟು ಫಲಿತಾಂಶ ಪಡೆದಿದ್ದಾರೆ ಈ ವರ್ಷದ ಸಿಬಿಎಸ್‌ಇ ಫಲಿತಾಂಶ ತಯಾರಿಸಲು ಮಂಡಳಿಯು ತನ್ನ ಪರಿಷ್ಕತ ವೌಲ್ಯ ಮಾಪನ ಯೋಜನೆಯನ್ನು ಅನುಸರಿಸಿತ್ತು. ಕೆಲವು ಪತ್ರಿಕೆಗಳ ಪರೀಕ್ಷೆಗಳು ರದ್ದಾಗಿರುವ ಕಾರಣ ಮಂಡಳಿಯು ತನ್ನ ವೌಲ್ಯ ಮಾಪನ ಯೋಜನೆಯನ್ನು ಪರಿಷ್ಕರಿಸಿತ್ತು. ರಿಸಲ್ಟ್ ನೋಡುವುದೇಗೆ..?* ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಅದರಲ್ಲಿ .. ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಬಹುದು.* ರಿಸಲ್ಟ್ 2020 ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು* ಲಾಗ್‌ ಇನ್ ಆಗಲು ಕೆಲವು ಮಾಹಿತಿಯನ್ನು ತುಂಬಬೇಕು* ಸಬ್ ಮಿಟ್ ಮಾಡಬೇಕು* ಸ್ಕ್ರೀನ್‌ನಲ್ಲಿ ರಿಸಲ್ಟ್ ಕಾಣಿಸಲಿದೆ* ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು