2020-201ನೇ ಸಾಲಿನ ದ್ವಿತೀಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಯಾವ-ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ನಡೆಯಲಿದೆ ಎನ್ನುವ ವಿವರ ಈ ಕೆಳಗಿನಂತಿದೆ. ಬೆಂಗಳೂರು, [ನ.04]:2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫೈನಲ್ ವೇಳಾಪಟ್ಟಿ ( )ಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಇಂದು [ಸೋಮವಾರ] ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಹೀಗಿತ್ತು 2020, ಮಾರ್ಚ್ 4ರಿಂದ ಮಾ, 23ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಗಳ ನಡುವೆ 3 ಭಾನುವಾರದ ರಜೆಗಳನ್ನು ಹೊರತುಪಡಿಸಿ ಬೇರಾವುದೇ ಸಾರ್ವತ್ರಿಕ ರಜೆಗಳು ಇಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಿರಂತರವಾಗಿ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಮೋದಿ ಮನೆ ಸ್ಥಳಾಂತರ ಗುಮಾನಿ, ಯಾದಗಿರಿ ಶಾಸಕ ಅಂದ್ರು ರಾಜೀನಾಮೆ ಕೊಡ್ತಿನಿ: ಇಂದಿನ ಟಾಪ್ 10 ಸುದ್ದಿ! ಕಳೆದ ತಿಂಗಳು ಅಂದ್ರೆ ಅಕ್ಟೋಬರ್ 1ರಂದು ದ್ವಿತೀಯ ಪಿಯು ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಬಗ್ಗೆ ಏನಾದರೂ ಆಪಕ್ಷೇಪಗಳು ಇದ್ದಲ್ಲಿ ತಿಳಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು. ಅಂತಿಮ ವೇಳಾಪಟ್ಟಿ ಇಂತಿದೆ* ಮಾರ್ಚ್ 4- ಇತಿಹಾಸ, ಬೇಸಿಕ್ ಮ್ಯಾಥ್ಸ್, ಭೌತಶಾಸ್ತ್ರ.* ಮಾರ್ಚ್ 5- ತೆಲಗು, ತಮಿಳು, ಮರಾಠಿ, ಮಲಯಾಳಂ, ಅರೇಬಿಕ್, ಫ್ರೆಂಚ್.* ಮಾರ್ಚ್ 6- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ* ಮಾರ್ಚ್ 7- ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ* ಮಾರ್ಚ್ 8- ರಜೆ (ಭಾನುವಾರ)* ಮಾರ್ಚ್ 9- ಎನ್​ಎಸ್​ಕ್ಯೂಎಫ್-ಐಟಿ, ರಿಟೇಲ್, ಅಟೋಮೊಬೈಲ್, ಹೆಲ್ತ್​ಕೇರ್, ಬ್ಯೂಟಿ ಆಂಡ್ ವೆಲ್​ನೆಸ್* ಮಾರ್ಚ್10- ಉರ್ದ* ಮಾರ್ಚ್ 11- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ* ಮಾರ್ಚ್ 12 - ಭೂಗೋಳಶಾಸ್ತ್ರ* ಮಾರ್ಚ್ 13 - ಶಿಕ್ಷಣ ()* ಮಾರ್ಚ್ 14 - ಮನಶಾಸ್ತ್ರ, ಎಲೆಕ್ಟ್ರಆನಿಕ್ಸ್, ಕಂಪ್ಯೂಟರ್ ಸೈನ್ಸ್* ಮಾರ್ಚ್ 15 - ರಜೆ (ಭಾನುವಾರ)* ಮಾರ್ಚ್ 16- ಲಾಜಿಕ್, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ* ಮಾರ್ಚ್ 17- ಅರ್ಥಶಾಸ್ತ್ರ, ಜೀವಶಾಸ್ತ್ರ* ಮಾರ್ಚ್ 18- ಹಿಂದಿ* ಮಾರ್ಚ್ 19- ಕನ್ನಡ* ಮಾರ್ಚ್ 20- ಸಂಸ್ಕೃತ* ಮಾರ್ಚ್.21- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ* ಮಾರ್ಚ್ 22 ರಜೆ-ಭಾನುವಾರ* ಮಾರ್ಚ್.23-ಆಂಗ್ಲಭಾಷೆ [)