ಫಲಿತಾಂಶ: ಸ್ಮೃತಿ, ಕೇಜ್ರಿ ಪುತ್ರರ ಗಮನಾರ್ಹ ಸಾಧನೆ! ಇಂದು 12ನೇ ತರಗತಿಯ ಫಲಿತಾಂಶ ಪ್ರಕಟ| ಉತ್ತಮ ಅಂಕಗಳಿಸಿದ ಸ್ಮೃತಿ ಇರಾನಿ, ಅರವಿಂದ್ ಕೇಜ್ರಿವಾಲ್ ಪುತ್ರರು| ಕೇಜ್ರಿವಾಲ್ ಪುತ್ರ ಪುಲ್ಕಿತ್ ಗೆ ಶೇ.96.4ರಷ್ಟು ಅಂಕ| ಸ್ಮೃತಿ ಇರಾನಿ ಪುತ್ರ ಜೊಹರ್ ಇರಾನಿಗೆ ಶೇ.91ರಷ್ಟು ಅಂಕ| ಮಕ್ಕಳ ಸಾಧನೆ ಕಂಡು ಹಿರಿಹಿರಿ ಹಿಗ್ಗಿದ ಸ್ಮೃತಿ, ಕೇಜ್ರಿ| ನವದೆಹಲಿ(ಮೇ.02):ಅವರಿಬ್ಬರೂ ರಾಜಕಾರಣದ ಮೊಗಸಾಲೆಯಲ್ಲಿ ಪರಸ್ಪರ ವಿರುದ್ಧ ದಿಕ್ಕಿನತ್ತ ಮುಖ ಮಾಡಿ ನಿಂತವರು. ಇಬ್ಬರೂ ದೇಶದ ಪ್ರಮುಖ ರಾಜಕಾರಣಿಗಳಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಜನಾಶೀರ್ವಾದ ಪಡೆಯಲು ಕಸರತ್ತು ನಡೆಸಿದ್ದಾರೆ. ಆದರೆ ಈ ರಾಜಕಾರಣಿಗಳ ಪುತ್ರರು ಮಾತ್ರ 12ನೇ ತರಗತಿಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. — .. 12 . 4– 91% .. 94% .. , ’ 🙏 ಇಂದುCBSE12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರ ಜೊಹರ್ ಇರಾನಿ ಶೇ.91ರಷ್ಟು ಅಂಕಗಳಿಸಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರ ಪುಲ್ಕಿತ್ ಕೇಜ್ರಿವಾಲ್ ಶೇ.96.4ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ. ’ -’ 96.4 . 🙏🏼 ಈ ವರ್ಷ ಒಟ್ಟು ಶೇ. 83.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇವರಲ್ಲಿ ಶೇ.88.70ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದು, ಶೇ.79.40ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಗಾಜಿಯಾಬಾದ್ ನ ವಿದ್ಯಾರ್ಥಿನಿ ಹಂಸಿಕಾ ಶುಕ್ಲಾ ಹಾಗೂ ಎಸ್ ವಿ ಸ್ಕೂಲ್ ಮುಜಫ್ಫರ್ ನಗರದ ಕರಿಶ್ಮಾ ಅರೋರಾ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರು ಸಮಾನ ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.