2018ನೇ ಸಾಲಿನ ಫಲಿತಾಂಶ ಪ್ರಕಟ, ರಾಜ್ಯದ 23 ಪರೀಕ್ಷಾರ್ಥಿಗಳು ಸೆಲೆಕ್ಟ್ 2018ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, 759 ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದಾರೆ. ನವದೆಹಲಿ, [ಏ.05]:2018ನೇ ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 759 ಪರೀಕ್ಷಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 577 ಮಂದಿ ಪುರುಷರು ಹಾಗೂ 182 ಮಂದಿ ಮಹಿಳೆಯರಾಗಿದ್ದಾರೆ. ಕನಿಶಕ್​ ಕಟಾರಿಯಾ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಅಕ್ಷತಾ ಜೈನ್ 2ನೇ ರ‍್ಯಾಂಕ್, ಜುನೈದ್ ಅಹಮ್ಮದ್ 3ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇನ್ನು 759 ಪರೀಕ್ಷಾರ್ಥಿಗಳ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್​ ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್​ ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ. ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆಯನ್ನು ಜೂನ್​ ತಿಂಗಳಿನಲ್ಲಿ ನಡೆಸಲಾಗಿತ್ತು. ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 5 ಲಕ್ಷ ಜನರು ಮಾತ್ರ ಪರೀಕ್ಷೆಯನ್ನು ಎದುರಿಸಿದ್ದರು. ಇವರಲ್ಲಿ 10,468 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದರು. ಮುಖ್ಯ ಪರೀಕ್ಷೆ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ 2018 ರಲ್ಲಿ ನಡೆದಿತ್ತು. ರಾಜ್ಯದ 23 ವಿದ್ಯಾರ್ಥಿಗಳು ಪಾಸಾದವರ ಹೆಸರುಗಳು ಇಂತಿವೆ 1.ರಾಹುಲ್​​ ಶರಣಪ್ಪ ಶಂಕನೂರ -17ನೇ ರ‍್ಯಾಂಕ್2.ಲಕ್ಷ್ಮೀ ಎನ್​​ -45ನೇ ರ‍್ಯಾಂಕ್3.ಆಕಾಶ್​​​​ ಎಸ್​​ -78ನೇ ರ‍್ಯಾಂಕ್4.ಕೃತುಕಕಾ -100ನೇ ರ‍್ಯಾಂಕ್5.ಕೌಶಿಕ್​​​​ ಎಚ್​​​ಆರ್​​​ -240ನೇರ‍್ಯಾಂಕ್6.ವಿವೇಕ್​​ ಎಚ್​​​​ಬಿ -257ನೇ ರ‍್ಯಾಂಕ್7.ನಿವೇದಿತಾ -303ನೇ ರ‍್ಯಾಂಕ್8.ಗಿರೀಶ್​​ ಧರ್ಮರಾಜ್​​​ ಕಲಗೊಂಡ್​​​ -307ನೇ ರ‍್ಯಾಂಕ್9.ಮಿರ್ಜಾ ಖಾದರ್​​​ ಬೈಗಿ -336ನೇ ರ‍್ಯಾಂಕ್10.ತೇಜಸ್​​​​ ಯುಪಿ -338ನೇ ರ‍್ಯಾಂಕ್11.ಹರ್ಷವರ್ಧನ್​​ ಬಿಜೆ -352ನೇ ರ‍್ಯಾಂಕ್12.ಪಕೀರೆಶ್​​​ ಕಲ್ಲಪ್ಪ ಬಾದಾಮಿ -372ನೇರ‍್ಯಾಂಕ್13.ಡಾ. ನಾಗಾರ್ಜುನ ಗೌಡ -418ನೇ ರ‍್ಯಾಂಕ್14.ಅಶ್ವಿಜಾ ಬಿವಿ -423ನೇ ರ‍್ಯಾಂಕ್15.ಮಂಜುನಾಥ್​​ ಆರ್​ -495ನೇ ರ‍್ಯಾಂಕ್16.ಬ್ರಿಂದಾ ಎಸ್​​ -496ನೇ ರ‍್ಯಾಂಕ್17.ಹೇಮಂಥ್​​​ -612ನೇ ರ‍್ಯಾಂಕ್18.ಶೃತಿ ಎಂಕೆ -637ನೇ ರ‍್ಯಾಂಕ್19.ವೆಂಕಟ್​​​ರಾಮ್​​​ -694ನೇ ರ‍್ಯಾಂಕ್20.ಸಂತೋಷ ಹೆಚ್​​​ -753ನೇ ರ‍್ಯಾಂಕ್21.ಅಶೋಕ್​​ ಕುಮಾರ್​ ಎಸ್​​ -711ನೇ ರ‍್ಯಾಂಕ್22.ರಾಘವೇಂದ್ರ ಎನ್​​ -739ನೇ ರ‍್ಯಾಂಕ್23.ಶಶಿಕಿರಣ್​​​ -754ನೇ ರ‍್ಯಾಂಕ್ ಸೆಲೆಕ್ಷನ್ ಲಿಸ್ಟ್ ಗಾಗಿಇಲ್ಲಿ ಕ್ಲಿಕ್ಕಿಸಿ