ಹೀಗೆ ಮಾಡಿದರೆ ಓದಿದ್ದು, ತಲೆಗೆ ಹೋಗುತ್ತೆ! ಪರೀಕ್ಷೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಭಯ. ಆತಂಕ. ಪೋಷಕರೂ ಆತಂಕಗೊಂಡಿರುತ್ತಾರೆ. ಆದರೆ, ಸರಿಯಾಗಿ ಓದಿಕೊಂಡಿದ್ದರೆ, ಎಲ್ಲವೂ ಸರಿಹೋಗುತ್ತೆ. ಖುಷ್ ಖುಷಿಯಾಗಿ ಓದಲು ಇಲ್ಲಿವೆ ಟಿಪ್ಸ್.... ಸಮಯವಿಲ್ಲವೆಂಬ ನೆಪ ಹೇಳಿ, ಎಷ್ಟೊ ಮುಖ್ಯ ವಿಷಯಗಳನ್ನು ಓದದೇ ಮುಂದೊಡುತ್ತೇವೆ. ಪ್ರತಿ ದಿನ ಓದುವುದರಿಂದ ಎಲ್ಲವೂ ನೆನಪಿನಲ್ಲಿರುತ್ತೆ ಎಂಬುವುದು ಪೂರ್ಣ ಸತ್ಯವಲ್ಲ. ಆದರೆ, ಓದುವುದನ್ನು ಸೂಕ್ತ ರೀತಿಯಲ್ಲಿ ಓದಿದರೆ ನೆನಪಿನಲ್ಲಿ ಇರುವುದು ಗ್ಯಾರಂಟಿ. ಒಬ್ಬೊಬ್ಬರಿಗೆ ಒಂದೊಂದು ರೀತಿ ಓದಿದರೆ ನೆನಪಿನಲ್ಲಿರುತ್ತೆ. ನಿಮಗೆ ಯಾವುದು ಸೂಕ್ತವೋ, ಅಂಥ ವಿಧಾನವನ್ನು ನೀವೇ ಆಯ್ದುಕೊಳ್ಳಿ.... ಯಾವ ರೀತಿ ಓದಿದರೆ ಬೆಸ್ಟ್?