700 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 700 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಬೆಂಗಳೂರು, [ನ.24]: ರಾಜ್ಯದ ಸರಕಾರಿ ಮೌಲಾನಾ ಆಜಾದ್ ಮಾದರಿ 100 ಶಾಲೆಗಳಿಗೆ ಹೊಸದಾಗಿ 700 ಶಿಕ್ಷಕರ ಹುದ್ದೆ ಸೃಜನೆಯಾಗಿದ್ದು, ಈ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವ ಆಯೋಗ [ಕೆಪಿಎಸ್ ಸಿ] ಆದೇಶ ಹೊರಡಿಸಿದೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕ ಡಿಸೆಂಬರ್ 22, 2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. * ಹುದ್ದೆಗಳು: 700ಮುಖ್ಯಶಿಕ್ಷಕ-80ಭಾಷಾ ಶಿಕ್ಷಕರು-79ಇಂಗ್ಲಿಷ್ ಭಾಷಾ ಶಿಕ್ಷಕ-79ಉರ್ದು ಟೀಚರ್-79ಗಣೀತ ಟೀಚರ್-79ವಿಜ್ಞಾನ ಟೀಚರ್-79ಸಮಾಜ-ವಿಜ್ಞಾನ- 79 * ಪರೀಕ್ಷಾ ಮಾದರಿ:ಮೇಲೆ ತಿಳಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಪರೀಕ್ಷೆ ಇರಲಿದ್ದು, ಆ ಪರೀಕ್ಷೆ ಮಾದರಿ ಹೀಗಿರುತ್ತದೆ. ಪೇಪರ್ 1: ಜನರಲ್ ನಾಲೇಜ್ ಪ್ರಶ್ನೆ ಪತ್ರಿಕೆ 100 ಅಂಕಗಳಿಗೆ, ಒಂದುವರೆ ಗಂಟೆ [ತಾಸು] ಅವಧಿ.ಪೇಪರ್ 2: ಸಂವಹನ ಪ್ರಶ್ನೆ ಪತ್ರಿಕೆ 100 ಅಂಕಕ್ಕೆ, ಎರಡುವರೆ ಗಂಟೆ.ಪೇಪರ್ 3: ಜನರಲ್ ಕನ್ನಡ [35] , ಜನರಲ್ ಇಂಗ್ಲೀಷ್ [35] , ಕಂಪ್ಯೂಟರ್ ನಾಲೇಜ್ [30] ಒಟ್ಟು 100 ಅಂಕ ಪ್ರಶ್ನೆ ಪತ್ರಿಕೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಚೇರಿಯ ವೆಬ್ ಸೈಟ್ ನಲ್ಲಿ ತಿಳಿಯಲುಇಲ್ಲಿ ಕ್ಲಿಕ್ಕಿಸಿ