ಯುಜಿಸಿ ಹೊಸ ಪೋರ್ಟಲ್‌ನಲ್ಲಿ ಹೊಸ ಕೋರ್ಸು: ಉಚಿತವಾಗಿಯೇ ಲಭ್ಯ * ಜುಲೈ 29ರಂದು ಈ ಹೊಸ ಕೋರ್ಸುಗಳಿಗೆ ಚಾಲನೆ ನೀಡಿದ ಯುಜಿಸಿ* ಕೃತಕ ಬುದ್ಧಿ ಮತ್ತೆ ಸೇರಿದಂತೆ ಹಲವು ತಾಂತ್ರಿಕ ಕೋರ್ಸುಗಳು ಲಭ್ಯ* ಇಂಗ್ಲಿಷ್ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬೋಧನೆ ಲಭ್ಯ ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಹೊಸ ಹೊಸ ಕೋರ್ಸುಗಳನ್ನು ಪರಿಚಯಿಸಲಾಗುತ್ತಿದೆ. ಆ ಮೂಲಕ ಉನ್ನತ ಶಿಕ್ಷಣವನ್ನು ಹೆಚ್ಚೆಚ್ಚು ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಹೆಚ್ಚಿನ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿಯುಜಿಸಿ ಹೊಸ ಪೋರ್ಟಲ್‌ನಲ್ಲಿ 23,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(), ಮತ್ತು ಬಾಲ್ಯದ ಆರೈಕೆಯ ಕಾರ್ಯಕ್ರಮಗಳು ಸೇರಿದಂತೆ ಸುಮಾರು 23 ಸಾವಿರಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು, ಮುಂದಿನ ಜುಲೈ 29ರಿಂದ ಹೊಸ ವೆಬ್ ಪೋರ್ಟಲ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ. ಪೋರ್ಟಲ್ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಮತ್ತು ದೇಶದ ದೂರದ ಭಾಗಗಳಲ್ಲಿ ಉನ್ನತ ಶಿಕ್ಷಣದ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. 2022-23ರ ಶೈಕ್ಷಣಿಕ ಅವಧಿಯಿಂದ ಈ ಕೋರ್ಸ್‌ಗಳನ್ನು ನೀಡಲು ತಮ್ಮ 7.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು () ಮತ್ತು ವಿಶೇಷ ಉದ್ದೇಶದ ವಾಹನ () ಕೇಂದ್ರಗಳೊಂದಿಗೆ ಇ-ಸಂಪನ್ಮೂಲಗಳನ್ನು ಸಂಯೋಜಿಸಲು ಯುಜಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. "ಉನ್ನತ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನದ ಭಾಗವಾಗಿ, ಯುಜಿಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.ಫಿಲ್ಮ್ ಮೇಕರ್ ಆಗುವುದು ಹೇಗೆ? ಡಿಜಿಟಲ್ ಪ್ರವೇಶವನ್ನು ಒದಗಿಸುವುದು ಮತ್ತು ಇ-ಆಡಳಿತ ಸೇವೆಗಳನ್ನು ನಾಗರಿಕರಿಗೆ ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ವಾಸಿಸುವವರಿಗೆ ಅವರ ಮನೆ ಬಾಗಿಲಿಗೆ ಲಭ್ಯವಾಗುವಂತೆ ಮಾಡುವುದು ಸಾಮಾನ್ಯ ಸೇವಾ ಕೇಂದ್ರಗಳ () ಗುರಿಯಾಗಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಸುಮಾರು 2.5 ಲಕ್ಷ CSCಗಳು ಮತ್ತು SPVಗಳು ಸೇರಿ ದೇಶಾದ್ಯಂತ ಒಟ್ಟು 5 ಲಕ್ಷಕ್ಕೂ ಹೆಚ್ಚು / ಕೇಂದ್ರಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. " ಗಳು ಮತ್ತು ಗಳನ್ನು ಸ್ಥಳೀಯ ಸಮುದಾಯಕ್ಕೆ ಸೇರಿದ ಮತ್ತು ಗ್ರಾಮ ಮಟ್ಟದ ಉದ್ಯಮಿಗಳು ( -) ಎಂದು ಕರೆಯಲಾಗುವ ಉದ್ಯಮಿಗಳು ನಿರ್ವಹಿಸುತ್ತಿದ್ದಾರೆ. ಗಳು ಆನ್‌ಲೈನ್ ಸೇವೆಗಳನ್ನು ನೀಡುವ ಮೂಲಕ ತಮ್ಮ ಜೀವನವನ್ನು ಗಳಿಸಲು ಕೇಂದ್ರಗಳನ್ನು ನಿರ್ವಹಿಸುತ್ತವೆ. ಈ ಕೇಂದ್ರಗಳು ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ ಅಂತ ವಿವರಿಸಿದ್ದಾರೆ ಜಗದೀಶ್ಕುಮಾರ್. 23,000 ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 137 ಸ್ವಯಂ ( ) ಕೋರ್ಸ್‌ಗಳು ಹಾಗೂ 25 ಇಂಜಿನಿಯರಿಂಗ್ ಅಲ್ಲದ ಕೋರ್ಸ್‌ಗಳನ್ನು ಸೇರಿವೆ. ಹಿಂದು ಕಾಲೇಜ್‌ಗೆ 1 ಕೋಟಿ ರೂ. ನಿಧಿ ಸ್ಥಾಪಿಸಿದ ಹಳೆಯ ವಿದ್ಯಾರ್ಥಿ! ಅಂದಹಾಗೇ ಯುಜಿಸಿ ಪೋರ್ಟಲ್‌ನಲ್ಲಿ ಇವುಗಳನ್ನು ಪ್ರವೇಶಿಸಲು ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲಾ ಕೋರ್ಸ್‌ಗಳು ಉಚಿತ. ಆದಾಗ್ಯೂ, ಸಿಎಸ್‌ಸಿ/ಎಸ್‌ವಿಪಿಯ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಪಡೆಯಲು, ಬಳಕೆದಾರರು ವಿಎಲ್‌ಇಗಳ ಪ್ರಯತ್ನಗಳು ಮತ್ತು ಅವರ ಮೂಲಸೌಕರ್ಯದ ವೆಚ್ಚವನ್ನು ಮರುಪಾವತಿಸಲು ದಿನಕ್ಕೆ ರೂ.20 ಅಥವಾ ತಿಂಗಳಿಗೆ ರೂ 500 ಶುಲ್ಕವನ್ನು ಪಾವತಿಸಬೇಕಾಗುತ್ತದೆ. "ಇದು ಆಯುಷ್ಮಾನ್ ಭಾರತ್ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಇ-ಶ್ರಮ್, ಪ್ಯಾನ್ ಕಾರ್ಡ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (ಪಿಎಂಎಸ್‌ವೈಎಂ) ಮತ್ತು ಇತರ ಅನೇಕ ಸರ್ಕಾರಿ ಯೋಜನೆಗಳಿಗೆ ಹೋಲುತ್ತದೆ" ಎಂದು ಜಗದೀಶ್ ಕುಮಾರ್ ತಿಳಿಸಿದ್ದಾರೆ.