2nd ; ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ! ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ವಿಶೇಷವೆಂದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲ. ಬೆಂಗಳೂರು (ಜೂನ್.18):ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ದ‌ಕ್ಷಿಣ ಕನ್ನಡ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ. ಕಾಮರ್ಸ್ ನಲ್ಲಿ ಮೂವರು, ಸೈನ್ಸ್ ನಲ್ಲಿ ಇಬ್ಬರು ಟಾಪರ್ಸ್ ಆಗಿದ್ದಾರೆ. ಹೀಗಾಗಿ ಜಿಲ್ಲೆಗೆ ಡಬಲ್ ಧಮಾಕಾ. ಆದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲದಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯಕ್ಕೆ ಟಾಪರ್ಸ್ ಆದ ವಿದ್ಯಾರ್ಥಿಗಳ ಜಿಲ್ಲಾವಾರು/ವಿಭಾಗವಾರು ಮಾಹಿತಿ ಇಲ್ಲಿದೆ.ಕಲಾ ವಿಭಾಗದ ಟಾಪರ್ಸ್​​ ಲಿಸ್ಟ್​​​ 2nd 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ ವಾಣಿಜ್ಯ ವಿಭಾಗದ ಟಾಪರ್ಸ್​​ ಲಿಸ್ಟ್​​​ 2nd 2022; ದ್ವಿತೀಯ ಪಿಯುಸಿ 61.88% ಫಲಿತಾಂಶ, ದಕ್ಷಿಣ ಕನ್ನಡ ಫಸ್ಟ್ ವಿಜ್ಞಾನ ವಿಭಾಗದ ಟಾಪರ್ಸ್​​ ಲಿಸ್ಟ್​​​