11 ಅಂಕದಿಂದ 10 ವರ್ಷದ ಶ್ರಮ ಬೂದಿಯಾಯ್ತು.. ವೈರಲ್ ಆದ ಐಎಎಸ್ ಆಕಾಂಕ್ಷಿಯ ಟ್ವೀಟ್ ! ತಮ್ಮ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯನ್ನು ಕ್ಲಿಯರ್ ಮಾಡುವಲ್ಲಿ ವಿಫಲವಾದ ಐಎಎಸ್ ಆಕಾಂಕ್ಷಿಯ ಕಥೆಯಿದು. ಪರೀಕ್ಷೆಯನ್ನು ಪಾಸ್ ಮಾಡುವ ನಿಟ್ಟಿನಲ್ಲಿ ಅಗಾಧ ಪರಿಶ್ರಮ ಹಾಕಿದರೂ, ಕೊನೆಗೆ ಕೇವಲ 11 ಅಂಕಗಳಿಂದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ತಪ್ಪಿಸಿಕೊಂಡ ರಜತ್ ಸಂಬ್ಯಾಲ್ ಮಾಡಿರುವ ಟ್ವೀಟ್ ಹಲವರಿಗೆ ಸ್ಫೂರ್ತಿ ನೀಡುವಂಥದ್ದು. ನವದೆಹಲಿ(ಜೂ.1):ಕೇಂದ್ರ ಲೋಕಸೇವಾ ಆಯೋಗ ಅಥವಾ ಯುಪಿಎಸ್ ಸಿ ಪರೀಕ್ಷೆಯಲ್ಲಿ ( ) ಪಾಸ್ ಆದವರಿಗೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಅಭಿನಂದನೆಗಳು ಹರಿದುಬರುತ್ತಿದೆ. ಆದರೆ, ಯುಪಿಎಸ್ ಸಿ ಪರೀಕ್ಷೆಯಲ್ಲಿ ಸೋಲು ಕಂಡವರ ನೋವಿಗೆ ಸಮಾಧಾನ ಹೇಳುವವರೇ ಇಲ್ಲ. ತನ್ನ ಕೊನೆಯ ಯತ್ನದಲ್ಲಿ ಕೇವಲ 11 ಅಂಕದಿಂದ ಪರೀಕ್ಷೆ ಕ್ಲಿಯರ್ ಮಾಡುವಲ್ಲಿ ವಿಫಲವಾದ ರಜತ್ ಸಂಬ್ಯಾಲ್ ( ) ಮಾಡಿರುವ ಟ್ವೀಟ್, ಸಣ್ಣ ಪುಟ್ಟ ಪರೀಕ್ಷೆಯಲ್ಲಿ ಫೇಲ್, ಕಡಿಮೆ ಅಂಕ ಬಂತು ಎಂದಾಗ ಆತ್ಮಹತ್ಯೆ ಮಾಡಿಕೊಳ್ಳುವಂಥ ವಿದ್ಯಾರ್ಥಿಗಳಿಗೆ ಖಂಡಿತಾ ಸ್ಫೂರ್ತಿಯಾಗಬಲ್ಲುದು.ಕೇವಲ 11 ಅಂಕದಿಂದ ಯುಪಿಎಸ್ ಸಿ ಪರೀಕ್ಷೆ ಕ್ಲಿಯರ್ ಮಾಡುವಲ್ಲಿ ವಿಫಲವಾದ ರಜತ್ ಸಂಬ್ಯಾಲ್, "ನನ್ನ ಹತ್ತು ವರ್ಷದ ಪರಿಶ್ರಮ ಕೊನೆಯಲ್ಲಿ ಬೂದಿಯಾಯಿತು" ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಫಲಿತಾಂಶವನ್ನು ವಿಶ್ವಾಸ ತುಂಬುವ ರೀತಿಯಲ್ಲೇ ನಾನು ತೆಗೆದುಕೊಳ್ಳಲಿದ್ದು, "ನಾನು ಇನ್ನೂ ಮೇಲೇರುತ್ತೇನೆ' ಎಂದು ಬರೆದುಕೊಂಡಿದ್ದಾರೆ.ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ರಜತ್ ಸಂಬ್ಯಾಲ್, ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಎಸ್ ಪಿಯಲ್ಲಿ ಈ ವರ್ಷ ತಮ್ಮ ಕೊನೆಯ ಹಾಗೂ 6ನೇ ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ. ಹಿಂದಿನ ಐದು ಪ್ರಯತ್ನಗಳಲ್ಲಿ ಅಂತಿಮ ಸುತ್ತಿಗೇರಲು ಅವರು ವಿಫಲವಾಗಿದ್ದರು. ಆದರೆ, ಈ ಬಾರಿ ಖಂಡಿತವಾಗಿ ಪರೀಕ್ಷೆ ಕ್ಲಿಯರ್ ಮಾಡಿ ಐಎಎಸ್ ಆಗುವ ಭರವಸೆಯನ್ನು ಹೊಂದಿದ್ದರು. ಆದರೆ, ಮತ್ತೊಮ್ಮೆ ಅದೃಷ್ಟ ಅವರ ಕೈ ಹಿಡಿಯಲಿಲ್ಲ. 10 ವರ್ಷದ ನನ್ನ ಪರಿಶ್ರಮ ಕೊನೆಯಲ್ಲಿ ಬೂದಿಯಾಯಿತು. ನನ್ನ ಆರು ಯುಪಿಎಸ್ ಸಿ ಪ್ರಯತ್ನಗಳು ಮುಗಿದವು. ಮೂರು ಬಾರಿ ಪ್ರಿಲಿಮ್ಸ್ ಹಂತದಲ್ಲಿಯೇ ಫೇಲ್ ಆದೆ, ಎರಡು ಬಾರಿ ಪ್ರಧಾನ ಪರೀಕ್ಷೆಯಲ್ಲಿ ಫೇಲ್ ಆದೆ. ನನ್ನ ಕೊನೆಯ ಯತ್ನದಲ್ಲಿ, ನಿನ್ನೆ, ಸಂದರ್ಶನ ಹಂತದಲ್ಲಿ ಬಂದ ಕಡಿಮೆ ಅಂಕದಿಂದ ಸೋಲು ಕಂಡೆ, ಕೇವಲ 11 ಅಂಕದಿಂದ ಪರೀಕ್ಷೆಯಲ್ಲಿ ಫೇಲ್ ಆದೆ' ಎಂದು ಸಂಬ್ಯಾಲ್ ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಸಂಬಾ ಜಿಲ್ಲೆಯಲ್ಲಿ ಜನಿಸಿದ ರಜತ್, ಜಮ್ಮುವಿನಲ್ಲಿಯೇ ಹೆಚ್ಚಿನ ವಿದ್ಯಾಬ್ಯಾಸ ಪೂರೈಸಿದ್ದರು.ಟ್ವೀಟ್ ಜೊತೆಗೆ, ಸಂಬ್ಯಾಲ್ ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಅವರು ಯುಪಿಎಸ್ ಸಿ ಪರೀಕ್ಷೆಯ ರಿಪೋರ್ಟ್ ಕಾರ್ಡ್ ಆಗಿದ್ದರೆ, ಇನ್ನೊಂದು, ದೆಹಲಿಯ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಕಚೇರಿಯ ಹೊರಗೆ ಸೆರೆಹಿಡಿದ ಅವರ ಚಿತ್ರವಾಗಿದೆ. ಅವರು ಒಟ್ಟು 942 ಅಂಕಗಳನ್ನು ಪಡೆದಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅವರ ಟ್ವೀಟ್‌ಗೆ ಹಲವಾರು ಜನರು ಪ್ರೋತ್ಸಾಹದಾಯಕ ಸಂದೇಶಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.ಸಂಬ್ಯಾಲ್ ಸ್ಟ್ರಕ್ಚರಲ್ ಇಂಜಿನಿಯರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ಒಬ್ಬ ಟ್ವಿಟರ್ ಬಳಕೆದಾರ ಹೇಳಿದ್ದಾರೆ. "ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತಿವೆ. ವಿಧಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ನೀವು ಸ್ಟ್ರಕ್ಚರಲ್ ಇಂಜಿನಿಯರ್ ಆಗಿ ಮಿಂಚಬಹುದು' ಎಂದು ಬರೆದಿದ್ದಾರೆ. ಎಕ್ಸಾಂ ಪಾಸ್ ಆದ ಬಳಿಕವೇ ಮದುವೆ ಅಂದ್ರಿದ್ರು ನನ್ನ ತಾಯಿ: ಟಾಪರ್ ಅರುಣಾಇನ್ನೊಬ್ಬ ಬಳಕೆದಾರರು ಕಳೆದ 10 ವರ್ಷಗಳಲ್ಲಿ ಅವರು ಗಳಿಸಿದ ಅಪಾರ ಜ್ಞಾನದಿಂದ ಇತರ ಆಕಾಂಕ್ಷಿಗಳಿಗೆ ಪರೀಕ್ಷೆಯನ್ನು ಭೇದಿಸಲು ಸಹಾಯ ಮಾಡಬಹುದು ಎಂದು ಬರೆದಿದ್ದಾರೆ. 'ಒಪ್ಪುತ್ತೇನೆ! ಪ್ರಕ್ರಿಯೆಯಲ್ಲಿ ಪಡೆದ ಅಪಾರ ಜ್ಞಾನವನ್ನು ನಿರ್ಲಕ್ಷಿಸಬಾರದು. ಇದು ಎಲ್ಲಾ ಕಾಲಕ್ಕೂ ನಿಮ್ಮೊಂದಿಗೆ ಇರುತ್ತದೆ. ಭವಿಷ್ಯದ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ನಾನು ನಿಮಗೆ ಸಲಹೆ ನೀಡುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ.ಸೋಲುಗಳೇ ಯಶಸ್ಸಿನ ಮೆಟ್ಟಿಲು, ಇದು ನನ್ನ 7ನೇ ಅಟ್ಟೆಂಪ್ಟ್: ಯುಪಿಎಸ್ಸಿ ಟಾಪರ್‌ ದೀಪಕ್‌ ಶೇಟ್‌ಯಶಸ್ಸಿನ ಕಥೆಗಳ ಹೊರತಾಗಿ, ಕೆಲವೊಮ್ಮೆ "ಅಂತಹ ಪ್ರಯಾಣಗಳನ್ನು ಕೇಳುವುದು ಮುಖ್ಯ" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಯುಪಿಎಸ್ ಸಿ ಸೋಮವಾರ ತನ್ನ ಅಂತಿಮ ಫಲಿತಾಂಶ ಪ್ರಕಟಿಸಿದೆ. 685 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದೆ. ಫಲಿತಾಂಶಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.