ದೃಷ್ಟಿ ವಿಶೇಷ ಚೇತನೆ ಟಾಪರ್, ಯುವತಿ ಸಾಧನೆ ಮೈಸೂರು (ಮೇ.30):ಕೇಂದ್ರ ಲೋಕಸೇವಾ ಆಯೋಗವು ( ) 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆಯಾಗಿದೆ.ಮೈಸೂರಿನ () ಪಿರಿಯಾಪಟ್ಟಣ () ತಾಲೂಕಿನ ಕುಡುಕೂರು ಗ್ರಾಮ ಮೇಘನಾ ಕೆ.ಟಿ. ( ) ಯುಪಿಎಸ್ ಸಿ () ಟಾಪರ್ ಆಗಿ ಹೊರಹೊಮ್ಮಿದ್ದಾಳೆ. 2021ರ ಯುಪಿಎಸ್ಸಿಯಲ್ಲಿ ದೇಶಕ್ಕೆ 425 ನೇ ರ್ಯಾಂಕ್ ಪಡೆದಿರೋ ಮೇಘನಾ. ಕೆ.ಟಿ ದೃಷ್ಟಿ ವಿಶೇಷ ಚೇತನೆ. 2020ರಲ್ಲೂ ಯುಪಿಎಸ್ಸಿಯಲ್ಲಿ 465 ನೇ ರ್ಯಾಂಕ್ ಪಡೆದಿದ್ದ ಮೇಘನಾ. 2015 ರಲ್ಲಿ ಕೆಎಎಸ್ ನಲ್ಲಿ () 11 ನೇ ರ್ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ( ) ಕರ್ತವ್ಯ ನಿರ್ವಹಿಸುತ್ತಿದ್ರು. ಬಳಿಕ ಖಜಾನೆ ಇಲಾಖೆಯಲ್ಲಿ ( ) ಕರ್ತವ್ಯ ನಿರ್ವಹಿಸುತ್ತಿದ್ದಾರೆ. UPSCಯಲ್ಲಿ 92ನೇ ರ‍್ಯಾಂಕ್‌ ಪಡೆದ‌ ವೈದ್ಯಾಧಿಕಾರಿ CHITRADURGAದ ಕುವರ! ಕುಡಕೂಡಿನ ತಾಂಡವ ಮೂರ್ತಿ , ನವನೀತ ದಂಪತಿಗಳ ಪುತ್ರಿಯಾಗಿರುವ ಮೇಘನಾ. ಕೆ.ಟಿ ಸದ್ಯ ಬೆಂಗಳೂರಿನ () ಕೆಂಗೇರಿಯಲ್ಲಿ ವಾಸ ಮಾಡುತ್ತಿದ್ದಾರೆ. 10ನೇ ತರಗತಿಯಲ್ಲಿದ್ದ ವೇಳೆ ರೆಟಿನಾ ಸಮಸ್ಯೆ ( ) ಎದುರಾಗಿ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದ ಮೇಘನಾ. ಸಮಸ್ಯೆ ಮೆಟ್ಟಿನಿಂತು ಯುಪಿಎಸ್ ಸಿ ಯಲ್ಲಿ ಸಾಧನೆ ಮಾಡಿ ಛಲಬಿಡದ ಸಾಧಕಿಯಾಗಿದ್ದಾರೆ. ಕರ್ನಾಟಕದ () 24 ಮಂದಿ ಈ ಬಾರಿ ಯುಪಿಎಸ್‌ಸಿ ಟಾಪರ್ ಆಗಿದ್ದು, ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ ಪಡೆದಿದ್ದು ರಾಜ್ಯದ ವಿದ್ಯಾರ್ಥಿಗಳ ಪೈಕಿ ಟಾಪ್ ನಲ್ಲಿದ್ದಾರೆ. ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್ ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ1.ಅವಿನಾಶ್ - ದಾವಣಗೆರೆ (31ನೇ )2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ )3.ನಿಖೀಲ್ ಬಸವರಾಜ್ ಪಾಟೀಲ್ (139ನೇ )4.ವಿನಯ್ ಕುಮಾರ್ ಗದ್ಗೆ (151ನೇ )5.ಚಿತ್ತರಂಜನ್ (155ನೇ )6.ಮನೋಜ್ ಕುಮಾರ್ (157ನೇ )7.ಅಪೂರ್ವ ಬಸೂರ್ - ಕೊಪ್ಪಳ (191ನೇ )8.ನಿತ್ಯಾ ಆರ್ (207ನೇ )9.ಮಂಜನಾಥ್ ಆರ್ (219ನೇ )10.ರಾಜೇಶ್ ಪೊನ್ನಪ್ಪ (222ನೇ )11.ಸಾಹಿತ್ಯ ಅಲದಕಟ್ಟಿ (250ನೇ )12.ಕಲ್ಪಶ್ರೀ ಕೆ. ಆರ್ (291ನೇ )13.ಅರುಣ್ ಎಂ (308ನೇ )14.ದೀಪಕ್ ರಾಮಚಂದ್ರ ಸೇಠ್ (311ನೇ )15.ಹರ್ಷವರ್ಧನ್ ಬಿ.ಜೆ (318ನೇ )16.ವಿನಯ್ ಕುಮಾರ್ ಡಿ ಹೆಚ್ (352ನೇ )17.ಮೇಘನಾ ಕೆ.ಟಿ - ಮೈಸೂರು(425ನೇ )18.ಅವಿನಂದನ್ ಬಿಎಂ (455ನೇ )19.ಸವಿತಾ ಗೋಯಲ್ (479ನೇ )20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ )21.ಚೇತನ್ ಕೆ (532ನೇ )22.ಶುಭಂ ಪ್ರಕಾಶ್ (568ನೇ )23.ಪ್ರಶಾಂತ್ ಕುಮಾರ್ ಬಿ ಒ (641ನೇ )24.ಸುಚಿನ್ ಕೆ ವಿ (682ನೇ ) 2021; ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ , ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ -..inಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಕರ್ನಾಟಕದ 24 ಅಭ್ಯರ್ಥಿಗಳು ಸೇರಿ ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ದೇಶಕ್ಕೆ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.