UPSCಯಲ್ಲಿ 92ನೇ ರ‍್ಯಾಂಕ್‌ ಪಡೆದ‌ ವೈದ್ಯಾಧಿಕಾರಿ Chitradurgaದ ಕುವರ! ಚಿತ್ರದುರ್ಗ (ಮೇ.30):ಚಿತ್ರದುರ್ಗ () ಜಿಲ್ಲೆಯ ಡಾ. ಬೆನಕ ಪ್ರಸಾದ್ ಕೇಂದ್ರ ಲೋಕಸೇವಾ ಆಯೋಗವು ( - ) 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶದಲ್ಲಿ ದೇಶಕ್ಕೆ 92ನೇ ರ್ಯಾಂಕ್ ಪಡೆದಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದ ನಿವೃತ್ತ ಉಪನ್ಯಾಸಕ ಜಯಪ್ಪ ಹಾಗೂ ಪಂಕಜ ದಂಪತಿಯ ಪುತ್ರ. ಡಾ ಬೆನಕ ಪ್ರಸಾದ್ ( ), ನಾಗರ ಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಪಟ್ಟಣದ ಸಂತ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಖಾಸಗಿ ಶಾಲೆಯಲ್ಲಿ ಪಿಯುಸಿ ಪೂರ್ಣಗೊಳಿಸಿದ್ದು ನಂತರ ಎಂಬಿಬಿಎಸ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಮೆಡಿಕಲ್ () ಮುಗಿಸಿದ ವರ್ಷವೇ 2019ರಲ್ಲಿ ಸರ್ಕಾರಿ ವೈದ್ಯರಾಗಿ ನೇಮಕಗೊಂಡಿದ್ದರು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಕೋವಿಡ್ ಸಮಯದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೂ ಆಗಾಗ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದರು. ಇದರ ಜೊತೆಗೆ ಎಷ್ಟೋ ಕೋವಿಡ್ ರೋಗಿಗಳ ಗುಣಮುಖರಾಗಲಿಕ್ಕೆ ಇವರ ಸೇವೆಯೂ ಅನನ್ಯವಾಗಿದೆ. ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್ ಇದರ ಜೊತೆ ಜೊತೆಗೆ ತಂದೆಯ ಬಹುದಿನದ ಆಸೆಯಂತೆ ಪರೀಕ್ಷೆಗೆ ತುಂಬಾ ತಯಾರಿ ನಡೆಸಿದ್ದರು. ಇದಕ್ಕಾಗಿ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು. ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 92ನೇ ರ್ಯಾಂಕ್ ಪಡೆದಿದ್ದಾರೆ. ಜಿಲ್ಲೆಗೆ ಇದು ಹೆಮ್ಮೆಯ ಪಡುವ ವಿಷಯವಾಗಿದೆ. ಆದ್ರೆ ದುರದೃಷ್ಟವಶಾತ್ ತನ್ನ ಮುದ್ದಾದ ಮಗನ ಸಾಧನೆ ನೋಡಲಿಕ್ಕೆ ತಂದೆ ಇಲ್ಲವಲ್ಲ ಎಂಬುದೇ ಬೇಸರದ ಸಂಗತಿ. ಸದ್ಯ ದಿ. ಜಯಪ್ಪ ಅವರು ಕಳೆದ ಒಂದು ವರ್ಷಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದರು. ತಂದೆಯ ಆಸೆಯಂತೆ ನನ್ನ ಮಗ ಅಧಿಕಾರಿಯಾಗಿದ್ದಾನೆ. 27ನೇ ವಯಸ್ಸಿಗೆ ದೊಡ್ಡ ಅಧಿಕಾರಿ ಆಗುವ ಅವಕಾಶ ಲಭಿಸಿದೆ. ಕಷ್ಟಪಟ್ಟು ಅಧ್ಯಯನ ಮಾಡಿದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅಧಿಕಾರಿಯಾಗಿ ಜನಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದು ತಾಯಿ ಪಂಕಜ ತಿಳಿಸಿದರು. ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ1.ಅವಿನಾಶ್ - ದಾವಣಗೆರೆ (31ನೇ )2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ )3.ನಿಖೀಲ್ ಬಸವರಾಜ್ ಪಾಟೀಲ್ (139ನೇ )4.ವಿನಯ್ ಕುಮಾರ್ ಗದ್ಗೆ (151ನೇ )5.ಚಿತ್ತರಂಜನ್ (155ನೇ )6.ಮನೋಜ್ ಕುಮಾರ್ (157ನೇ )7.ಅಪೂರ್ವ ಬಸೂರ್ (191ನೇ )8.ನಿತ್ಯಾ ಆರ್ (207ನೇ )9.ಮಂಜನಾಥ್ ಆರ್ (219ನೇ )10.ರಾಜೇಶ್ ಪೊನ್ನಪ್ಪ (222ನೇ )11.ಸಾಹಿತ್ಯ ಅಲದಕಟ್ಟಿ (250ನೇ )12.ಕಲ್ಪಶ್ರೀ ಕೆ. ಆರ್ (291ನೇ )13.ಅರುಣ್ ಎಂ (308ನೇ )14.ದೀಪಕ್ ರಾಮಚಂದ್ರ ಸೇಠ್ (311ನೇ )15.ಹರ್ಷವರ್ಧನ್ ಬಿ.ಜೆ (318ನೇ )16.ವಿನಯ್ ಕುಮಾರ್ ಡಿ ಹೆಚ್ (352ನೇ )17.ಮೇಘನಾ ಕೆ.ಟಿ (425ನೇ )18.ಅವಿನಂದನ್ ಬಿಎಂ (455ನೇ )19.ಸವಿತಾ ಗೋಯಲ್ (479ನೇ )20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ )21.ಚೇತನ್ ಕೆ (532ನೇ )22.ಶುಭಂ ಪ್ರಕಾಶ್ (568ನೇ )23.ಪ್ರಶಾಂತ್ ಕುಮಾರ್ ಬಿ ಒ (641ನೇ )24.ಸುಚಿನ್ ಕೆ ವಿ (682ನೇ ) ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್ -..inಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.