2021; ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ , ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ಕೇಂದ್ರ ಲೋಕಸೇವಾ ಆಯೋಗವು 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ರ್ಯಾಂಕ್ ಪಡೆದಿರುವ ರಾಜ್ಯದ ಒಟ್ಟು 24 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ಬೆಂಗಳೂರು (ಮೇ.30):ಕೇಂದ್ರ ಲೋಕಸೇವಾ ಆಯೋಗವು 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ -..inಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ರಾಜ್ಯದ ಒಟ್ಟು 24 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದಾವಣಗೆರೆ ಮೂಲದ ಅವಿನಾಶ್ ದೇಶಕ್ಕೆ 31 ನೇ ಪಡೆದಿದ್ದಾರೆ. ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ1.ಅವಿನಾಶ್ - ದಾವಣಗೆರೆ (31ನೇ )2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ )3.ನಿಖೀಲ್ ಬಸವರಾಜ್ ಪಾಟೀಲ್ (139ನೇ )4.ವಿನಯ್ ಕುಮಾರ್ ಗದ್ಗೆ (151ನೇ )5.ಚಿತ್ತರಂಜನ್ (155ನೇ )6.ಮನೋಜ್ ಕುಮಾರ್ (157ನೇ )7.ಅಪೂರ್ವ ಬಸೂರ್ - ಕೊಪ್ಪಳ (191ನೇ )8.ನಿತ್ಯಾ ಆರ್ (207ನೇ )9.ಮಂಜನಾಥ್ ಆರ್ (219ನೇ )10.ರಾಜೇಶ್ ಪೊನ್ನಪ್ಪ (222ನೇ )11.ಸಾಹಿತ್ಯ ಅಲದಕಟ್ಟಿ (250ನೇ )12.ಕಲ್ಪಶ್ರೀ ಕೆ. ಆರ್ (291ನೇ )13.ಅರುಣ್ ಎಂ (308ನೇ )14.ದೀಪಕ್ ರಾಮಚಂದ್ರ ಸೇಠ್ (311ನೇ )15.ಹರ್ಷವರ್ಧನ್ ಬಿ.ಜೆ (318ನೇ )16.ವಿನಯ್ ಕುಮಾರ್ ಡಿ ಹೆಚ್ (352ನೇ )17.ಮೇಘನಾ ಕೆ.ಟಿ - ಮೈಸೂರು (425ನೇ )18.ಅವಿನಂದನ್ ಬಿಎಂ (455ನೇ )19.ಸವಿತಾ ಗೋಯಲ್ (479ನೇ )20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ )21.ಚೇತನ್ ಕೆ (532ನೇ )22.ಶುಭಂ ಪ್ರಕಾಶ್ (568ನೇ )23.ಪ್ರಶಾಂತ್ ಕುಮಾರ್ ಬಿ ಒ (641ನೇ )24.ಸುಚಿನ್ ಕೆ ವಿ (682ನೇ ) ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್ ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ (. ) ತರಬೇತಿ ಪಡೆದ ಎಂಟು ವಿಧ್ಯಾರ್ಥಿಗಳು ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದಿದ್ದಾರೆ. ಡಾ ರಾಜ್ ಕುಮಾರ್ ಅಕಾಡೆಮಿ ಅಣ್ಣಾವ್ರ ಕುಟುಂಬಸ್ಥರು ನಡೆಸುತ್ತಿದ್ದು , ರಾಘವೇಂದ್ರ ರಾಜ್ ಕುಮಾರ್ ಕಿರಿಯ ಸೊಸೆ ಶ್ರೀದೇವಿ ಅಕಾಡೆಮಿಯನ್ನ ನಡೆಸುತ್ತಿದ್ದಾರೆ.ಬೆನಕ ಪ್ರಸಾದ್ 92ನೇ ರ‍್ಯಾಂಕ್‌ ,ಮೇಘನಾ 425 ರ‍್ಯಾಂಕ್‌ ,ರಾಜೆಶ್ ಪೊನ್ನಪ್ಪ 222 ರ‍್ಯಾಂಕ್‌,ಪ್ರೀತಿ ಪಂಚಲ್ 449 ರ‍್ಯಾಂಕ್‌ಪ್ರಶಾಂತ್ ಕುಮಾರ್ 641 ರ‍್ಯಾಂಕ್‌ರವಿನಂದನ್ 455 ರ‍್ಯಾಂಕ್‌ನಿಖಿಲ್ ಬಿ ಪಾಟೀಲ್ 139 ರ‍್ಯಾಂಕ್‌ದೀಪಕ್ ಆರ್ ಶೆಟ್ಟಿ 311 ರ‍್ಯಾಂಕ್‌ ಪಡೆದಿದ್ದಾರೆ ಇನ್ನು ಯುಪಿಎಸ್ ಸಿ ಪರೀಕ್ಷೆಯಲ್ಲಿ ಶಿರಸಿಯ ಮನೋಜ್ ಆರ್. ಹೆಗಡೆ (29) 213ನೇ ರ‍್ಯಾಂಕ್‌ ಪಡೆದಿದ್ದು, ಶಿರಸಿಯ ಕಾಲೇಜಿನಲ್ಲಿ ಪಿಯುಸಿ ಮಾಡಿ ಧಾರವಾಡದಲ್ಲಿ ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ. ದೆಹಲಿಯಲ್ಲಿ ಡಾ. ಶಿವಕುಮಾರ್ ಹಾಗೂ ಶಿರಸಿಯಲ್ಲಿ ವಿ.ಆರ್. ಹೆಗಡೆ ಎಸ್‌.ಜಿ. ಕರಿಯರ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾಗಿದ್ದಾರೆ.