ಮುಂದಿನ ವರ್ಷದಿಂದ ಅನ್ಯಧರ್ಮದ ಮಕ್ಕಳಿಗಿಲ್ಲ ಕ್ಲಾರೆನ್ಸ್‌ ಶಾಲೆಯಲ್ಲಿ ಅಡ್ಮಿಷನ್‌! ಬೈಬಲ್ ವಿವಾದದ ಬಳಿಕ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಬೆಂಗಳೂರು(ಎ.30):ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿನ ( ) ಬೈಬಲ್ ವಿವಾದ ( ) ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕ್ರಿಶ್ಚಿಯನ್ ಮಕ್ಕಳಿಗೆ ( ) ಮಾತ್ರ ಪ್ರವೇಶ ನೀಡಲಾಗುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬಿಷಪ್ ಹೇಳಿಕೆ ನೀಡಿದ್ದಾರೆ.ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು: ಕ್ಲಾರೆನ್ಸ್ ಸ್ಕೂಲ್ಹೀಗಾಗಿ ಧರ್ಮದಂಗಲ್ ನಡುವೆ ಕ್ಲಾರೆನ್ಸ್ ಶಾಲೆ ಕಿಚ್ಚು ಹೊತ್ತಿಸಿದಂತಾಗಿದೆ. ಇನ್ನು ಕ್ಲಾರೆನ್ಸ್‌ ಹೈಸ್ಕೂಲ್‌ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ನಮ್ಮ ಸಂಸ್ಥೆಯಲ್ಲಿ ಬೈಬಲ್‌ನಿಂದ ನೈತಿಕ ಮೌಲ್ಯಗಳನ್ನು ಮಾತ್ರ ಕಲಿಸಲಾಗುತ್ತದೆ. ಪೋಷಕರಿಗೂ ಈ ಬಗ್ಗೆ ಮಾಹಿತಿ ಇದೆ, ಪೋಷಕರು ಅನುಮತಿ ನೀಡಿದ್ದಾರೆ ಎಂದು ಹೇಳಿದೆ. ಬೆಂಗಳೂರು(ಎ.30):ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿನ ( ) ಬೈಬಲ್ ವಿವಾದ ( ) ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕ್ರಿಶ್ಚಿಯನ್ ಮಕ್ಕಳಿಗೆ ( ) ಮಾತ್ರ ಪ್ರವೇಶ ನೀಡಲಾಗುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬಿಷಪ್ ಹೇಳಿಕೆ ನೀಡಿದ್ದಾರೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು: ಕ್ಲಾರೆನ್ಸ್ ಸ್ಕೂಲ್ ಹೀಗಾಗಿ ಧರ್ಮದಂಗಲ್ ನಡುವೆ ಕ್ಲಾರೆನ್ಸ್ ಶಾಲೆ ಕಿಚ್ಚು ಹೊತ್ತಿಸಿದಂತಾಗಿದೆ. ಇನ್ನು ಕ್ಲಾರೆನ್ಸ್‌ ಹೈಸ್ಕೂಲ್‌ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ನಮ್ಮ ಸಂಸ್ಥೆಯಲ್ಲಿ ಬೈಬಲ್‌ನಿಂದ ನೈತಿಕ ಮೌಲ್ಯಗಳನ್ನು ಮಾತ್ರ ಕಲಿಸಲಾಗುತ್ತದೆ. ಪೋಷಕರಿಗೂ ಈ ಬಗ್ಗೆ ಮಾಹಿತಿ ಇದೆ, ಪೋಷಕರು ಅನುಮತಿ ನೀಡಿದ್ದಾರೆ ಎಂದು ಹೇಳಿದೆ.