ಸಿಲಿಂಡರ್ ಸ್ಫೋಟ: ೧೦ ಮಂದಿಗೆ ಗಾಯ
ಮುಂಬೈ.ಜೂ. ೬- ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮುಂಬೈನ
ಚೆಂಬೂರಿನಲ್ಲಿ ನಡೆದಿದೆ.
ಘಟೆನ ೮.೩೦ರ ಸುಮಾರಿಗೆ ಚೆಂಬೂರಿನ ಗಿಡ್ವಾಣಿ ರಸ್ತೆಯಲ್ಲಿರುವ ಕಟ್ಟಡದಲ್ಲ ನಡೆದಿದೆ. ನೆಲಮಹಡಿಯಲ್ಲಿ ಮರದ ಪೀಠೋಪಕರಣಗಳನ್ನು
ಇಡಲಾಗಿತ್ತು. ಗಾಯಾಳುಗಳನ್ನು ನಗರದ ಗೋವಂಡಿ ಶತಾಬ್ದಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಗಾಜಿಯಾಬಾದ್‌ನ ಮನೆಯೊಂದರಲ್ಲಿ ಎಸಿ ಸ್ಫೋಟಗೊಂಡ ಘಟನೆ ನಡೆದಿದೆ. ಬಿಸಿಯಾದ ತಾಪಮಾನದಿಂದಾಗಿ ಎಸಿ ಸ್ಫೋಟಗೊಂಡಿದೆ ಎಂದು
ತಿಳಿದು ಬಂದಿದೆ.
ಸ್ಥಳೀಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಮನೆಯವರು ಹಾಗೂ ನೆರೆಹೊರೆಯವರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.
ಸಮೀಪದ ಅಗ್ನಿಶಾಮಕ ದಳದಿಂದ ಕನಿಷ್ಠ ಎರಡು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಬಳಿಕ ಹರಸಾಹಸ ಪಟ್ಟು ಬೆಂಕಿ ನಂದಿಸಲಾಗಿದೆ.