ಭ್ರಷ್ಟಾಚಾರದ ವಿರುದ್ಧ ಜನಾದೇಶ
ನವದೆಹಲಿ,ಜೂ.೬-ಲೋಕಸಭೆಯ ಈ ಭಾರಿಯ ಜನಾದೇಶ, ಬಿಜೆಪಿ ಮತ್ತು ಅದರ ದ್ವೇಷ ಮತ್ತು ಭ್ರಷ್ಟಾಚಾರದ ರಾಜಕಾರಣದ ವಿರುದ್ದವಾಗಿ ಬಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆದ ಚುನಾವಣೆಯಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನ ಎಂದು ಗೆದ್ದು ಬೀಗುತ್ತಿದ್ದ ಬಿಜೆಪಿಗೆ ದೇಶ ಜನರು ತಕ್ಕ ಉತ್ತರ ನೀಡಿದ್ಧಾರೆ ಎಂದು ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಈ ಬಾರಿಯ ಲೋಕಸಭೆಯ ಜನಾದೇಶ “ಭಾರತದ ಸಂವಿಧಾನದ ರಕ್ಷಣೆ ಮತ್ತು ಬೆಲೆ ಏರಿಕೆ, ನಿರುದ್ಯೋಗ ಮತ್ತು ಕ್ರೋನಿ ಬಂq
ವಾಳಶಾಹಿ ವಿರುದ್ಧ ಮೂಡಿ ಬಂದಿದೆ ಎಂದರು. ಪ್ರಜಾಪ್ರಭುತ್ವವನ್ನು ಉಳಿಸಲು” ಇಂಡಿಯಾ ನಾಯಕರು ನಡೆಸಿದ ಹೋರಾಟದ ಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ “ಫ್ಯಾಸಿಸ್ಟ್ ಆಡಳಿತ” ವಿರುದ್ಧ ಇಂಡಿಯಾ ಮೈತ್ರಿಕೂಟ ಹೋರಾಟ ಮುಂದುವರೆಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
“ಬಿಜೆಪಿ ಸರ್ಕಾರದಿಂದ ಆಡಳಿತ ನಡೆಸಬಾರದು ಎಂಬ ಜನರ ಬಯಕೆಯನ್ನು ಸಾಕಾರಗೊಳಿಸಲು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ಇದು ನಮ್ಮ ನಿರ್ಧಾರವಾಗಿದ್ದು, ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ, ಶರದ್ ಪವಾರ್, ರಾಹುಲ್ ಗಾಂಧಿ, ಎಂ ಕೆ ಸ್ಟಾಲಿನ್, ಅಖಿಲೇಶ್ ಯಾದವ್, ಅಭಿಷೇಕ್ ಬ್ಯಾನರ್ಜಿ, ಸೀತಾರಾಂ ಯೆಚೂರಿ, ತೇಜಸ್ವಿ ಯಾದವ್ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖರು , ದೀಪಂಕರ್ ಭಟ್ಟಾಚಾರ್ಯ, ಇತರರು ಖರ್ಗೆ ಅವರ ಮಾತಿಗ ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿಯ ಮಿತ್ರಪಕ್ಷಗಳಿಗೆ ಪಕ್ಷಾಂತರಕ್ಕೆ ಆಹ್ವಾನದಂತೆ ತೋರಿದ ಮಲ್ಲಿಕಾರ್ಜುನ ಖರ್ಗೆ, ” ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಅದರ ಹಲವು ನಿಬಂಧನೆಗಳಿಗೆ ತನ್ನ ಮೂಲಭೂತ ಬದ್ಧತೆ ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು ಇಂಡಿಯಾ ಮೈತ್ರಿಕೂಟ ಸ್ವಾಗತಿಸುತ್ತದೆ” ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷಗಳು ಮುಂದಿನ ಸರಕಾರ ರಚನೆಗೆ ಒಪ್ಪಂದ ಮಾಡಿಕೊಂಡ ದಿನವೇ, ಬಿಜೆಪಿ ಸರಕಾರದಿಂದ ಆಡಳಿತ ನಡೆಸಬಾರದು ಎಂಬ ಜನರ ಅಪೇಕ್ಷೆಯನ್ನು ಸಾಕಾರಗೊಳಿಸಲು ಭವಿಷ್ಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಪಕ್ಷಗಳು ಸ್ಪಷ್ಟಪಡಿಸಿವೆ. ಮುಂಬರುವ ಎನ್‌ಡಿಎ ಆಡಳಿತದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಲ ಬಿಜೆಪಿಯು ಸಂಖ್ಯೆಗಳನ್ನು ಕಡಿಮೆ ಮಾಡಲು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ. ಪ್ರತಿಪಕ್ಷಗಳು ಮೋದಿ ಆಡಳಿತವನ್ನು “ಫ್ಯಾಸಿಸ್ಟ್” ಎಂದು ಆರೋಪ ಮಾಡಿದ್ದಾರೆ.