ಮೋದಿಗೆ ಇಟಲಿ ಪ್ರಧಾನಿ ಅಭಿನಂದನೆ
ನವದೆಹಲಿ,ಜೂ.೫- ದೇಶದಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಭಿನಂದಿಸಿದ್ದಾರೆ
ಇಟಾಲಿಯನ್ ಭಾಷೆಯಲ್ಲಿ ಬರೆದ ಎಕ್ಸ್ ಪೋಸ್ಟ್‌ನಲ್ಲಿ, ಇಟಲಿ ಮತ್ತು ಭಾರತವನ್ನು “ಒಗ್ಗೂಡಿಸುವ ಸ್ನೇಹ ಬಲಪಡಿಸಲು” ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಅವರು ಹೇಳಿದ್ದಾರೆ.
ಉಭಯ ದೇಶಗಳ ’ಸ್ನೇಹವನ್ನು ಬಲಪಡಿಸಲು’ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ೨೯೨ ಸ್ಥಾನಗಳನ್ನು ಗೆದ್ದಿದ್ದು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.
“ಹೊಸ ಚುನಾವಣಾ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂಧೀಸುತ್ತೇನೆ. ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಬಾಂಧವ್ಯ ಬಲವರ್ಧನೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ೨೯೨ ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದು ಪ್ರತಿಪಕ್ಷ ಇಂಡಿತಾ ಬಣ ೨೩೩ ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ ೨೪೦ ಸ್ಥಾನಗಳಲ್ಲಿ ಗೆದ್ದಿದೆ, ಬಹುಮತದ ೨೭೨ ಕ್ಕೆ ಕಡಿಮೆಯಾಗಿದೆ, ಆದರೆ ಕಾಂಗ್ರೆಸ್ ೯೯ ಸ್ಥಾನಗಳನ್ನು ಗೆಲುವು ಸಾಧಿಸಿದೆ ೨೦೧೯ ರ ಅದರ ೫೨ ಸ್ಥಾನಗಳಿಂದ ಹೆಚ್ಚಳವಾಗಿದೆ. ಪ್ರಾದೇಶಿಕ ಸಂಘಟನೆಗಳು ಮತ್ತು ಸ್ವತಂತ್ರರು ಸೇರಿದಂತೆ ಇತರರು ೧೬ ಸ್ಥಾನ ಗೆದ್ದಿದ್ದಾರೆ.