ಏರ್ ಕೆನಡಾಗೆ ಬಾಂಬ್ ಬೆದರಿಕೆ
ನವದೆಹಲಿ,ಜೂ.೫:ಏರ್ ಕೆನಡಾ, ದೆಹಲಿ ಟೊರೆಂಟೊ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶೋಧ ನಡೆಸಿದ ನಂತರ
ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದಿರುವ ಕುರಿತು ಇಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಕೆನಡಾಕ್ಕೆ ತೆರಳಲಿದ್ದ ಏರ್ ಕೆನಡಾ-ದೆಹಲಿ ಟೊರೆಂಟೊ ವಿಮಾನಕ್ಕೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಸಂದೇಶವೊಂದನ್ನು ರವಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಟೊರೆಂಟೊಗೆ ತೆರಳುವ ವಿಮಾನದ ಪ್ರಯಾಣಿಕರಲ್ಲಿ ಭಯ ಸೃಷ್ಟಿಯಾಗಿತ್ತು. ಆದರೆ, ಇದು ಕೇವಲ ಬೆದರಿಕೆಗಾಗಿ ಮಾಡಿರುವ ಇ-ಮೇಲ್ ಕರೆ ಎಂದು ನಂತರ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದೆಹಲಿಯ ಅಂತಾರಾಷ್ಟ್ರೀಯ ಏರ್‌ಫೋರ್ಟ್ ಲಿಮಿಟೆಡ್ ಕಚೇರಿಗೆ ನಿನ್ನೆ ರಾತ್ರಿ ೧೦.೫೦ರ ವೇಳೆಗೆ ಬಾಂಬ್ ಬೆದರಿಕೆಯ ಇ-ಮೇಲ್ ರವಾನಿಸಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ನಂತರ ಭದ್ರತಾ ಪಡೆಗಳು ಭದ್ರತಾ ನಿಯಮಗಳನ್ವಯ ಸಂಪೂರ್ಣ ತಪಾಸಣೆ ನಡೆಸಿದ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿರುವ ಭದ್ರತಾ ಅಧಿಕಾರಿಗಳು ಈ ಬೆದರಿಕೆ ಕುರಿತಂತೆ ಅಗತ್ಯ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ.