ಭಗವಂತ ಖೂಬಾರ ಹ್ಯಾಟ್ರಿಕ್ ಕನಸು ನುಚ್ಚು ನೂರು 26 ವರ್ಷದಲ್ಲಿ ಸಂಸತ ಪ್ರವೇಶಿಸಿದ ಸಾಗರ ಖಂಡ್ರೆ
ವಿಶೇಷ ವರದಿ: ಶಿವಕುಮಾರ ಸ್ವಾಮಿ
ಬೀದರ್:ಜೂ.4: 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ 3ನೇ ಬಾರಿ ಸ್ಪರ್ಧಿಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಈ ಬಾರಿ ಹ್ಯಾಟ್ರಿಕ್ ಗೆಲುವು ಕಂಡಿದ್ದರು. ಆದರೆ, ಪಕ್ಷದ ಒಳಮುನಿಸು, ಮೇಲಾಗಿ ಔರಾದ್ ಶಾಸಕ ಪ್ರಭು ಚವ್ಹಾಣ ಅವರ ಜೊತೆಗಿನ ಕಚ್ಚಾಟ ಅವರ ಸೋಲಿಗೆ ಮುಳುವಾಯಿತು. ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಖೂಬಾ ಜೊತೆಗೆ ಆಗಾಗ ಕಾಣಿಸಿಕೊಂಡರೂ ಒಳಮುನಿಸು ಹಾಗೂ ಒಳಬೇಗುದಿ ಇವರ ಸೋಲಿಗೆ ಸರಳವಾಯಿತು. ಕೇವಲ ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ ಮಾತ್ರ ಶಕ್ತಿಮೀರಿ ಪ್ರಯತ್ನಿಸಿದರು. ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಹ ಅಷ್ಟುಕಷ್ಟೆ ಕಾರ್ಯ ನಿರ್ವಹಿಸಿದರು. ಚುನಾವಣೆಗೂ ಮುನ್ನ ಹಲವರು ಟಿಕೇಟ್ ರೇಸ್‍ನಲ್ಲಿದ್ದರು. ಇದೆಲ್ಲದರ ಮಧ್ಯ ಬಿಜೆಪಿ ವರಿಷ್ಟರು ಕೇಂದ್ರ ಸಚಿವ ಖೂಬಾಗೆ ಟಿಕೇಟ್ ನೀಡಿದ್ದರು. ಒಂದು ಸಾರ್ವಜನಿಕ ಸಭೆಯಲ್ಲಿ ಔರಾದ್ ಶಾಸಕ ಪ್ರಭು ಚವ್ಹಾಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯಂದ್ರ ಅವರ ಕಾಲಿಗೆ ಬಿದ್ದು ಭಗವಂತ ಖೂಬಾಗೆ ಟಿಕೇಟ್ ನೀಡಬಾರದೆಂದು ಹೇಳಿದ್ದರು. ಇದೆಲ್ಲವನ್ನು ಮೀರಿ ಬಿಜೆಪಿ ವರಿಷ್ಟರು ಕೇಂದ್ರ ಸಚಿವ ಖೂಬಾಗೆ ಟಿಕೇಟ್ ನೀಡಿದ್ದರು. ಪಕ್ಷದಲ್ಲಿ ದೊಡ್ಡ ಮುನಿಸು, ಬೂದಿ ಮುಚ್ಚಿದ ಕೆಂಡ ಅವರನ್ನು ಈ ಚುನಾವಣೆಯಲ್ಲಿ ಸೋಲಲ್ಲು ಕಾರಣವಾದಂಗೆ ತೋರುತ್ತಿದೆ. ಇದು ಒಂದೆಡೆಯಾದರೆ ಭಗವಂತ ಖೂಬಾ ಅವರ ಅತೀವ ಆತ್ಮವಿಶ್ವಾಸ ಅವರಿಗೆ ಸೋಲಲು ಮುಳುವಾಯಿತು.
ಇತ್ತ ಸಾಗರ ಖಂಡ್ರೆ ಅವರ ತಂದೆ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಯ ಎಲ್ಲ ಸಮಾಜ ಮುಖಂಡರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು. ಹಾಗೆ ತಮ್ಮ ಪಕ್ಷದ ಎಲ್ಲ ಹಾಲಿ ಮಾಜಿ ಶಾಸಕರನ್ನು ಒಂದುಗೂಡಿಸಿ ತಮ್ಮ ಪುತ್ರನ ಪರವಾಗಿ ಕೆಲಸ ಮಾಡಲು ಹುರಿದಂಬಿಸಿದರು. ಹೀಗಾಗಿ ಅವರ ಮಗನ ವಿಜಯ ಸರಳವಾಗಲು ಶುರುವಾಯಿತು. ಈ ಚುನಾವಣೆಯಲ್ಲಿ ಖೂಬಾ ಅವರು ಈಶ್ವರ ಖಂಡ್ರೆ ಅವರ ವಿರೂದ್ಧ ವಯಕ್ತಿಕ ಹೇಳಿಕೆ ನೀಡಿರುವುದು ಸಹ ಅವರ ಸೋಲಿಗೆ ಏಣಿಯಾಗಿರುವುದರಲ್ಲಿ ಎರಡು ಮಾತಿಲ್ಲ.
ಇದು ಒಂದು ಕಡೆಯಾದರೆ ಮರಠಾ ಸಮಾಜದ ಕೆಲವರ ಮುನಿಸು, ಈಶ್ವರ ಖಂಡ್ರೆ ಅವರು ವೀರಶೈವ ಲಿಂಗಾಯತ ಸಮಾಜದ ದೊಡ್ಡ ನಾಯಕರೆಂಬುದು ಮನಗಂಡು ಅವರ ಕೈ ಹಿಡಿಯುವಲ್ಲಿ ಜನರು ಮನಸ್ಸು ಮಾಡಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಭಗವಂತ ಖೂಬಾ ಅವರು ಹ್ಯಾಟ್ರಿಕ್ ಬಾರಿಸಬೇಕೆಂಬ ಕನಸ್ಸು ನುಚ್ಚು ನೂರು ಆಗಿ ಇಲ್ಲಿ ಹಳೆ ಬೇರಿ ಹೊಸ ಚಿಗುರು ಸಕ್ಷಸ್ ಆಗಿದೆ.