ಬಿಜೆಪಿ ಕಾರ್‍ಯಕರ್ತರ ಸಂಭ್ರಮ
ನವದೆಹಲಿ, ಜೂ.-೪- ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಚುನಾವಣಾ ಸಮೀಕ್ಷೆಯ ಪ್ರಕಾರ ಎನ್ ಡಿಎ ೩೦೫ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಇಂಡಿಯಾ ಮೈತ್ರಿಕೂಟ ೨೦೮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಎನ್‌ಡಿಎ ಗೆ ಇಂಡಿಯಾ ಬಾರಿ ಪೈಪೋಟಿ ನೀಡಿದೆ.
ಮದ್ಯ ಪ್ರದೇಶ, ಗುಜರಾತ್, ಒಡಿಶಾದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಬಾರಿ ಮುನ್ನಡೆ ಸಾಧಿಸಿದ್ದು ಕ್ಲೀನ್ ಸ್ವೀಪ್ ಮಾಡುತ್ತ ಹೆಕ್ಕೆ ಇಟ್ಟಿದೆ.
ಚುನಾವಣಾ ಸಮೀಕ್ಷೆ ಬಹುತೇಕ ನಿಜವಾಗುವತ್ತ ಸಾಗಿದೆ.ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇಂಡಿಯಾ ಮೈತ್ರಿಕೂಡ ತೀವ್ರ ಪೈಪೋಟಿ ನೀಡಿದೆ.
ರಾಜ್ಯದಲ್ಲಿ ನಿರೀಕ್ಷೆಗೆ ಮೀರಿ ಬಿಜೆಪಿಗೆ ಜನರಿಂದ ಬೆಂಬಲ ವ್ಯಕ್ತವಾಗಿದೆ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಕೈ ಹಿಡಿದಿಲ್ಲ. ರಾಜ್ಯದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದು ಕೊಂಡಿದ್ದಾರೆ.
ಉತ್ತರ ಭಾರತದ ಹಲವು ರಾಜ್ಯಗಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ದಕ್ಷಿಣ ಭಾರತದಲ್ಲಿಯೂ ಬಿಜೆಪಿ ಕಲಮಾಲಿ ಮಾಡಿದೆ. ಈ ಮೂಲಕ ಬಿಜೆಪಿ ಮೈತ್ರಿಕೂಟ ಬಾರಿ ಬಹು ಮತದೊಂದಿಗೆ ಅಧಿಕಾರ ಹಿಡಿಯುವುದು ಖಚಿತವಾಗಿದೆ.
ಪಶ್ಚಿಮ ವಂ, ಬಿಹಾರ ಮದ್ಯ ಪ್ರದೇಶ, ಆಂಧ್ರಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾರಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಹಕಾರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ೧೮೦ ಚುನಾವಣಾ ರಾಲಜಙಡೆಸಿದ್ದು ೧೧೦ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಹುಲ್ ಗಾಂದಿ ೬೨ ರಾಲಿನಡೆಸಿಧಸು ೧೯ ಕ್ಷೇತ್ರಗಳ್ಲಿ ಮುನ್ನಡೆ ಸಾಧಿಸಿದ್ದಾರೆ, ಅಮಿತ್ ಶಾ ೧೩೭ ರ್‍ಯಾಲಿಯಲ್ಲಿ ೮೬ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪ್ರಿಯಾಂಕ ಗಾಂದಿ ಪ್ರಚಾರ ನಡೆಸಿದ ೪೩ ಕ್ಷೇತ್ರಗಳಲ್ಲಿ ೨೧ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಮೂರನೇ ಬಾರಿಗೆ ಅಧಿಕಾರ
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಅಧಿಕಾರ ಹಿಡಿಯುವ ದಾಪುಗಾಲು ಇಟ್ಟಿದ್ದಾರೆ.
ಚುನಾವಣಾ ಆತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ೩೦೦ ಗಡಿ ದಾಟಿ ಮುನ್ನುಗಿದ್ದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ.