ನಗರ ಜನತೆಗೆ ಹಾವುಗಳ ಕಾಟ
ಬೆಂಗಳೂರು.ಜೂ.೩- ನಗರದಲ್ಲಿ ಮಳೆ ಆರ್ಭಟ ಜೋರಾಗಿದೆ. ಇದರ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥ, ಮನೆಯೊಳಗೆ ನೀರು ನುಗ್ಗಿ
ಅವಾಂತರ ಸೃಷ್ಟಿಸಿದೆ. ಇದರ ಜತೆಗೆ ಇದೀಗ ನಗರದ ಜನತೆಗೆ ಹಾವುಗಳ ಕಾಟ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ನಗರ ಕೆಲ ಪ್ರದೇಶಗಳಲ್ಲಿ ಮನೆಯೊಳಗೆ ಮತ್ತು ಮನೆಯ ಸುತ್ತಮುತ್ತ ಹಾವು ಕಾಣಿಸಿಕೊಂಡಿದ್ದು ಭಯಭೀತರಾಗುವಂತೆ ಮಾಡಿದೆ.
ಬೊಮ್ಮನ್ನಹಳ್ಳಿ, ಬ್ಯಾಟಾರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿ ನಗರ ವಯಲಗಳಲ್ಲಿ ಹಾವುಗಳು ಕಾಣಿಸಿಕೊಂಡಿವೆ.
ನಾಗರ ಹಾವು, ಚುಕ್ಕೆ ಹಾವುಗಳು, ರಸ್ಸೆಲ್ ಪೈಪರ್, ನೀರು ಹಾವುಗಳನ್ನು ರಕ್ಷಣೆ ಮಾಡಲಾಗಿದೆ.
ಸುಮಾರು ೧೧೦ ಪ್ರದೇಶಗಳಿಂದ ಕರೆಗಳು ಬಂದಿವೆ ಎಂದು ಬಿಬಿಎಂಪಿಯ ವನ್ಯಜೀವಿ ಸಂರಕ್ಷಣಾ ತಂಡ ಹೇಳಿದೆ.
ಕಳೆದ ವಾರ ೧೦೦ ಕರೆಗಳು ಬಂದಿದ್ದು ಪ್ರತಿ ದಿನ ೩೦ ಕರೆಗಳು ಬರುತ್ತಿವೆ ಎಂದು ಮಾಹಿತಿ ನೀಡಿದೆ.
ಯಲಹಂಕ ಮತ್ತು ಬೊಮ್ಮನಹಳ್ಳಿಯಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಸಹಾಯವಾಣಿಗೆ ಕರೆ ಮಾಡಿದರೂ ರಕ್ಷಣಾ
ಕಾರ್ಯದಲ್ಲಿ ವಿಳಂಭವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಂತಾನವೃದ್ಧಿ ಕಾಲವಾಗಿರುವುದರಿಂದ ಖಾಲಿ ಜಾಗ ಮತ್ತು ಪೊದೆಗಳಲ್ಲಿ ಹಾವಿನ ಮರಿಗಳಿರುತ್ತವೆ ಎಂದು ವನ್ಯಜೀವಿ ರಕ್ಷಣಾ ತಂಡದ
ಸದಸ್ಯ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಹಾವು ಕಂಡು ಬಂದರೆ ಬಿಬಿಎಂಪಿ ಸಹಾಯವಾಣಿ ೧೫೩೩, ಕರ್ನಾಟಕ ಅರನ್ಯ ಇಲಾಖೆ ಸಹಾಯವಾಣಿ ೧೯೨೬, ಬಿಬಿಎಂಪಿ
ಬನ್ಯಜೀವಿ ಸಹಾಯವಾಣಿ ೯೯೦೨೭೯೪೭೧೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.