ಮತಗಟ್ಟೆ ಸಮೀಕ್ಷೆ ತಲೆಕೆಳಗಾಗಲಿವೆ
ನವದೆಹಲಿ, ಜೂ.೩-ಲೋಕಸಭೆಯ ಚುನಾವಣಾ ಸಮೀಕ್ಷೆಗಳು ತಲೆಕೆಳಗಾಗಲಿವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರೆ. ಬಹುತೇಕ ಸಮೀಕ್ಷೆಗಳ ಭವಿಷ್ಯ ಚುನಾವಣಾ ಫಲಿತಾಂಶ ಬಂದಾಗ ತದ್ವಿರುದ್ದವಾಗಿರುವುದನ್ನು ನೋಡಿದ್ದೇವೆ. ಈ ಬಾರಿಯೂ ಹಾಗೆ ಆಗಲಿದೆ ಎಂದು ಹೇಳಿದ್ದಾರೆ.ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಚುನಾವಣಾ ಸಮೀಕ್ಷೆಯ ಮೇಲೆ ನಂಬಿಕೆ ಇಲ್ಲ. ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಡಿಸಿದ್ದಾರೆ
ಜೂನ್ ೧ ರಂದು ಸಂಜೆ ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಭಾರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ. ಈ ಬಾರಿ ೨೯೫ ಸ್ಥಾನಗಳಲ್ಲಿ ಗೆಲವು ಸಾಧಿಸುವ ವಿಶ್ವಾಸ ಮತ್ತು ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ನಾಳಿನ ಫಲಿತಾಂಶ ಸಮೀಕ್ಷೆಗಳಿಗೆ ವಿರುದ್ಧವಾಗಿರಲಿದೆ. ನಾಳೆ ತನಕ ಕಾದು ನೋಡೋಣ, ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಾವೂ ಕೂಡ ವಿಶ್ವಾಸದಲ್ಲಿದ್ದೇವೆ ಎಂದಿದ್ದಾರೆ.
ಕಲೈಂಜರ್‍ಗೆ ಗೌರವ
ತಮಿಳುನಾಡು ಮಾಜಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ೧೦೧ನೇ ಜನ್ಮದಿನದಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಅವರು ಕರುಣಾನಿಧಿ ಅವರೊಂದಿಗೆ ಅನೇಕ ಸಂದರ್ಭದಲ್ಲಿ ಭೇಟಿ ಆಗುವ ಮತ್ತು ಅವರ ಬುದ್ದಿವಂತಿಕೆಯ ಮಾತು ಕೇಳುವ ಅವಕಾಶ ಸಿಕ್ಕಿತ್ತು. ಇದು ನನ್ನ ಅದೃಷ್ಟ ಎಂದು ಅವರು ಹೇಳಿದ್ದಾರೆ.
ಈ ವೇಳೆ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಡಿಎಂಕೆ ಹಿರಿಯ ನಾಯಕ ಟಿ.ಆರ್ ಬಾಲು, ಸಿಪಿಐನ ಸೀತಾರಾಮ್ ಯಚೂರಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗಿದ್ದರು.