ಷೇರು ವಹಿವಾಟು ಸುಳಿಯಲ್ಲಿ ಎಲೋನ್
ವಾಷಿಂಗ್ಟನ್, ಜೂ. ೧- ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಕಂಪನಿ ೭.೫ ಶತಕೋಟಿ ಡಾಲರ್ ಮೊತ್ತದ ಷೇರು ವಹಿವಾಟು ಆರೋಪಕ್ಕೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೋನ್ ಮಸ್ಕ್ ಗುರಿಯಾಗಿದ್ದಾರೆ.
ಆಂತರಿಕ ವಹಿವಾಟಿನಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಷೇರುದಾರರು ಎಲನ್ ಮಸ್ಕ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಇದರಿಮದ ಟೆಸ್ಲಾ ಕಂಪನಿಯ ಮುಖ್ಯಸ್ಥ ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿದ್ದಾರೆ.
೨೦೨೨ ರಲ್ಲಿ ೭.೫ ಶತಕೋಟಿಗೂ ಡಾಲರ್ ಮೌಲ್ಯದ ಷೇರುಗಳ ಮಾರಾಟದಲ್ಲಿ ಆಂತರಿಕೆ ಷೇರು ವಹಿವಾಟು ನಡೆದಿದೆ. ಟೆಸ್ಲಾ ಇಂಕ್ ಎದುರಿಸುತ್ತಿರುವ ಉತ್ಪಾದನೆ ಮತ್ತು ವಿತರಣಾ ಸಂಖ್ಯೆಗಳ ಎಲನ್ ಮಸ್ಕ್ ಅವರಿಗೆ ಗೊತ್ತಿದ್ದೂ ಈ ರೀತಿ ಮಾಡಿದ್ದಾರೆ ಎಂದು ಷೇರುದಾರರು ಆರೋಪಿಸಿದ್ದಾರೆ.
ಟೆಸ್ಲಾ ಹೂಡಿಕೆದಾರ ಮೈಕೆಲ್ ಪೆರ್ರಿ ತನ್ನ ಮೊಕದ್ದಮೆಯಲ್ಲಿ ಎಲೋನ್ ಮಸ್ಕ್ ೨೦೨೨ ರಲ್ಲಿ ಟೆಸ್ಲಾ ತನ್ನ ನಾಲ್ಕನೇ ತ್ರೈಮಾಸಿಕ ಗುರಿ ಸಾಧಿಸಲು ಈ ರೀರಿ ಮಾಡಿದ್ದಾರ ಎನ್ನುವ ಆರೋಪ ಕೇಳಿ ಬಂದಿದ್ದು ಡೆಲವೇರ್ ಚಾನ್ಸೆರಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
“ಎಲೋನ್ ಮಸ್ಕ್” ಟೆಸ್ಲಾದಲ್ಲಿ ತನ್ನ ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಕಂಪನಿ ಮತ್ತು ಅದರ ಷೇರುದಾರರಿಗೆ ತನ್ನ ವಿಶ್ವಾಸಾರ್ಹ ಕರ್ತವ್ಯಗಳನ್ನು ಉಲ್ಲಂಘಿಸಲಾಗಿದೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ವಿರುದ್ದ ಷೇರುದಾರರು ಆರೋಪ ಮಾಡಿ ದೂರು ದಾಖಲು ಮಾಡಿದ್ದಾರೆ.
ಮೊಕದ್ದಮೆಯಲ್ಲಿ ಷೇರು ಮಾರಾಟದಲ್ಲಿನ ಕಾನೂನು ಬಾಧ್ಯತೆಗಳನ್ನು ಮತ್ತು ಟೆಸ್ಲಾ ಅವರ ಹಣಕಾಸಿನ ಕಾರ್ಯಕ್ಷಮತೆಯ ಹೇಳಿಕೆ ಅನುಸರಿಸುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
೨೦೨೨ರ ತ್ರೈಮಾಸಿಕ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಂತರಿಕ ಷೇರು ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಹೂಡಿಕೆದಾರರಿಗೆ ಬಾರಿ ನಷ್ಟವಾಗಿದೆ ಎಂದು ತಿಳಿಸಲಾಗಿದೆ.