ನಾನು ಬಿಜೆಪಿ ಕಾರ್ಯಕರ್ತ: ಮಿಥುನ್ ಚಕ್ರವರ್ತಿ
ಕೋಲ್ಕತ್ತಾ.ಜೂ.೧- ನಾನು ಬಿಜೆಪಿ ಕಾರ್ಯಕರ್ತ ಹೊರತು ಬಿಜೆಪಿ ನಾಯಕನಲ್ಲ ಎಂದು ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ಕೊನೆಯ ಹಂತದ ಲೋಕಸಭಾ ಚುನಾವಣೆ ಇಂದು ನಡೆಯಿತು.
ಕೋಲ್ಕತ್ತಾದ ಬೆಲ್ಗಾಚಿಯಾದಲ್ಲಿನ ಮತಗಟ್ಟೆಯಲ್ಲಿ ಬೆಳಗ್ಗೆ ೭ ಗಂಟೆಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಮತ ಚಲಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಜೆಪಿ ಕಾರ್ಯಕರ್ತ. ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ.
ನನ್ನ ಕುಟುಂಬವನ್ನು ಸಹ ನೋಡಿಕೊಳ್ಳುತ್ತಿರುವುದರಿಂದ ನಾಳೆಯಿಂದ ಸಿನಿಮಾಗಳ ಬಗ್ಗೆ ಮಾತನಾಡುತ್ತೇನೆ ಎಂದರು.
೭೩ ವರ್ಷದ ಮಿಥುನ್ ಚಕ್ರವರ್ತಿ ಇತ್ತೀಚೆಗೆ ಮೆದುಳಿನ ಸ್ಟ್ರೋಕ್‌ಗೆ ಒಳಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದರು.