ಇಸ್ರೇಲ್ ದಾಳಿ: ಅಮೆರಿಕ ಖಂಡನೆ
ವಾಷಿಂಗ್ಟನ್, ಮೇ.೩೧- ರಫಾದ ಮೇಲೆ, ಇಸ್ರೇಲ್ ನಡೆಸುತ್ತಿರುವ ಆಕ್ರಮಣಕಾರಿ ಪ್ರವೃತ್ತಿಯನ್ನು ಅಮೇರಿಕಾ ತೀವ್ರವಾಗಿ ಖಂಡಿಸಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಸೇನೆಯ ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಿರುವ ಹಿನ್ನೆಲೆಯಲ್ಲಿ ರಫಾದಲ್ಲಿರುವ ಮಗ್ಧ ನಾಗರಿಕ ಸಾವು ನೋವು ಸಂಭವಿಸುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಸ್ರೇಲ್ ವಿಷಯದಲ್ಲಿ ಅಮೆರಿಕಾ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಲಿದೆ. ಆಕ್ರಮಣಕಾರಿ ಪ್ರವೃತ್ತಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಫಾ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಆಗುವುದಿಲ್ಲ. ಈ ರೀತಿಯ ದಾಳಿಗಳಿಂದ ಭವಿಷ್ಯದಲ್ಲಿ ಇಸ್ರೇಲ್ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ
ಇಸ್ರೇಲ್‌ನ ಮೂರು ವಾರಗಳ ಹಳೆಯ ರಫಾ ಆಕ್ರಮಣ ಹೊಸ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ಪಶ್ಚಿಮ ಜಿಲ್ಲೆಯ ಟೆಂಟ್ ಕ್ಯಾಂಪ್ ಮೇಲೆ ದಾಳಿಯಿಂದ ಕನಿಷ್ಠ ೪೫ ಜನರು ಸಾವನ್ನಪ್ಪಿದ್ದಾರೆ. ಪರಿಹಾರ ಶಿಬಿರದ ಮೇಲೆ ನಡೆದ ದಾಳಿಯ ಬಗ್ಗೆ ಜಾಗತಿಕ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಬಿಡೆನ್ ಆಡಳಿತ ಇಸ್ರೇಲ್‌ಗೆ ಸ್ಥಳಾಂತರಗೊಳ್ಳಲು ಇಸ್ರೇಲ್‌ನ ಹಿಂದಿನ ಆದೇಶಗ ಅನುಸರಿಸಿದ ನಿರಾಶ್ರಿತರಿಂದ ತುಂಬಿರುವ ದಕ್ಷಿಣ ಗಾಜಾದ ನಗರವಾದ ರಫಾದಲ್ಲಿ ದೊಡ್ಡ ಪ್ರಮಾಣದ ಮಿಲಿಟರಿ ಆಕ್ರಮಣ ಪ್ರಾರಂಭಿಸುವುದರ ವಿರುದ್ಧ ಇಸ್ರೇಲ್‌ಗೆ ಪದೇ ಪದೇ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.
ನಾಗರಿಕರನ್ನು ರಕ್ಷಿಸುವ ವಿಶ್ವಾಸಾರ್ಹ ಯೋಜನೆ ಇಲ್ಲದೆ ಇಸ್ರೇಲಿ ಪಡೆಗಳು ಅಲ್ಲಿ ದೊಡ್ಡ ಆಕ್ರಮಣವನ್ನು ನಡೆಸಿದರೆ ಅಮೇರಿಕಾ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸುತ್ತದೆ ಎಂದು ಅಧ್ಯಕ್ಷ ಜೋ ಬಿಡನ್ ಅವರೇ ಕಳೆದ ತಿಂಗಳು ಇಸ್ರೇಲ್‌ಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆಯ ಹೊರತಾಗಿಯೂ ಇಸ್ರೇಲ್ ರಫಾ ಮೇಲೆ ಅದರಲ್ಲಿಯೂ ನಾಗರಿಕ ಮೇಲೆ ನಡೆಸುತ್ತಿರುವ ದಾಳಿಗೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದೆ