ಚೀನಿಯರಿಂದ ಭಾರತ ಆಕ್ರಮಣ ಅಯ್ಯರ್ ವಿವಾದಾಸ್ಪದ ಹೇಳಿಕೆ
ನವದೆಹಲಿ,ಮೇ.೨೯- ೧೯೬೨ ರ ಇಂಡೋ-ಚೀನಾ ಯುದ್ಧದ ಸಮಯದಲ್ಲಿ ಚೀನಿಯರು ಭಾರತವನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನುವ ಮೂಲಕ ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ವಿವಾದ ಹುಟ್ಟುಹಾಕಿದೆ.
ವಿಡಿಯೋದಲ್ಲಿ ಜವಾಹರ್ ಲಾಲ್ ನೆಹರೂ ಅವರ ಮೊದಲ ನೇಮಕಾತಿ’ ಪುಸ್ತಕ ಬಿಡುಗಡೆ ಮಾಡಿದ ಮಣಿಶಂಕರ್ ಅಯ್ಯರ್, “… ಅಕ್ಟೋಬರ್ ೧೯೬೨ ರಲ್ಲಿ, ಚೀನೀಯರು ಭಾರತದ ಮೇಲೆ ಆಕ್ರಮಣ ಮಾಡಿದರು” ಎಂದು ಹೇಳುವುದನ್ನು ಕೇಳಲಾಗುತ್ತದೆ ಎಂದಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಣಿಶಂಕರ್ ಅಯ್ಯರ್ ಅವರು ಎಫ್‌ಸಿಸಿಯಲ್ಲಿ ಜವಾಹರ್ ಲಾಲ್ ನೆಹರೂ ಅವರ ಮೊದಲ ನೇಮಕಾತಿ ಎಂಬ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿ ೧೯೬೨ ರಲ್ಲಿ ಚೀನಾದ ಆಕ್ರಮಣ ’ಆರೋಪಿಸಿರುವುದು ಲಜ್ಜೆಗೆಟ್ಟ ಹೇಳಿಕೆ ಎಂದು ಹರಿಹಾಯ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಮಣಿಶಂಕರ್ ಅಯ್ಯರ್ ಅವರ ಹೇಳಿಕೆ ವಯಕ್ತಿಕ, ತಮ್ಮ ಹೇಳಿಕೆಗೆ ಪದೇ ಪದೇ ಕ್ಷಮೆಯಾಚಿಸುತ್ತಾರೆ. ಹೀಗಾಗಿ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದಿದ್ಧಾರೆ
ಮೇ ೨೦೨೦ ರಲ್ಲಿ ಚೀನಾದ ಆಕ್ರಮಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು “ಕ್ಲೀನ್ ಚಿಟ್” ನೀಡಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಪದೇ ಪದೇ ಒಂದಿಲ್ಲೊಂದು ವಿಷಯದಲ್ಲಿ ವಿವಾದ ಸೃಷ್ಟಿ ಮಾಡುವುದು ಮತ್ತು ಕೊನೆಗೆ ಅದಕ್ಕಾಗಿ ಕ್ಷಮೆಯಾಚಿಸುವುದು ಇತ್ತೀಚಿನ ದಿನಗಳಲ್ಲಿ ಮಣಿಶಂಕರ್ ಅಯ್ಯರ್ ನಿರಂತರವಾಗಿ ಮಾಡಿಕೊಂಡು ಬಂದದ್ದು ಅದಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.