ಸೌದತ್ತಿ ಎಲ್ಲಮ್ಮನ ದರ್ಶನ ಪಡೆದ ಶಿವಣ್ಣ
ಬೆಳಗಾವಿ.ಮೇ. ೨೯- ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೌದತ್ತಿ ಎಲ್ಲಮ್ಮನ ದರ್ಶನ ಪಡೆದಿದ್ದಾರೆ.
ಬೆಳಗಾವಿಯಲ್ಲಿ ಉತ್ತರಕಾಂಡ ಚಿತ್ರೀಕರಣದಲ್ಲಿ ಪಾಲ್ಗೊಂಡ ನಂತರ ದೇವಿಯ ದರ್ಶನ ಪಡೆದು ಪುನೀತರಾದರು.
ಸೌದತ್ತಿ ಎಲ್ಲಮ್ಮ ಶಿವಣ್ಣನ ಪಾಲಿಗೆ ಅದೃಷ್ಟ ದೇವತೆ. ಈ ಹಿಂದೆ ಶ್ರೀರಾಮ್, ಮೈಲಾರಿ ಮುಂತಾದ ಹಿಟ್ ಚಿತ್ರಗಳ ಚಿತ್ರೀಕರಣದ ಸಂದರ್ಭಗಳಲ್ಲಿ ದೇವಿಯ ದರ್ಶನ ಪಡೆದಿದ್ದರು. ಆ ಸಿನಿಮಾಗಳೆಲ್ಲಾ ಕರುನಾಡ ಚಕ್ರವರ್ತಿಗೆ ಯಶಸ್ಸಿ ತಂದುಕೊಟ್ಟಿದ್ದವು.
ಇದೀಗ ನಟ ಶಿವಾರಾಜ್ ಕುಮಾರ್ ಸೌದತ್ತಿ ಎಲ್ಲಮ್ಮ ಮತೊಮ್ಮೆ ಆರ್ಶೀವಾದ ಪಡೆದಿದ್ದಾರೆ.
ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ, ಐಶ್ವರ್ಯ ರಾಜೇಶ್, ಭಾವನಾ ಮೆನನ್, ರಂಗಾಯಣ ರಘು ಮುಂತಾದವರಿದ್ದಾರೆ.