ಮೀಸಲಾತಿ ರಕ್ಷಣೆ ನಮ್ಮ ಉದ್ದೇಶ
ನವದೆಹಲಿ, ಮೇ.೨೮- ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಓಟ್‌ಬ್ಯಾಂಕ್ ರಾಜಕಾರಣದಲ್ಲಿ ನಿರತವಾಗಿದೆ ಎಂದು ಗಂಭೀರ ಆರೋಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಮುದಾಯಗಳ ಮೀಸಲಾತಿ ರಕ್ಷಣೆ ನಮ್ಮ ಉದ್ದೇಶ ಎಂದಿದ್ಧಾರೆ
ಕಾಂಗ್ರೆಸ್ ಪಕ್ಷ ಪರಿಶಿಷ್ಠ ಸಮುದಾಯ, ಹಿಂದುಳಿದ ವರ್ಗದ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಅಲ್ಪ ಸಂಖ್ಯಾತರ ದೊಡ್ಡ ಶತ್ರು ಕಾಂಗ್ರೆಸ್ ಎಂದು ಹರಿಹಾಯ್ದಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಅಂತಿಮ ಹಂತದ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತ ಅದರ ಮೈತ್ರಿಕೂಟ ಇಂಡಿಯಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. “ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರ ಹಿಂದುಳಿದ ವರ್ಗದ ಜನರನ್ನು ಕತ್ತಲೆಯಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಪಕ್ಷ ಅವನ್ನು ಲೂಟಿ ಮಾಡುತ್ತಿದೆ. ಇದು ಚುನಾವಣೆ ಸಮಯ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದ್ಧಾರೆ.
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಾರತದ ಸಂವಿಧಾನದ ಮೂಲ ಆಶವನ್ನೇ ಬುಡಮೇಲು ಮಾಡುತ್ತಿವೆ, ವಾಸ್ತವವಾಗಿ ಅವರು ಮೀಸಲಾತಿಯ ವಿರೋಧಿಗಳು ಎಂದು ಹರಿಹಾಯ್ದಿದ್ಧಾರೆ
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ. ವೋಟ್ ಬ್ಯಾಂಕ್‌ಗಾಗಿ ಮುಂಬರುವ ಪೀಳಿಗೆಯನ್ನು ನಾಶಮಾಡಲು ಬಯಸಿದೆ, ದಲಿತ, ಬುಡಕಟ್ಟು ಮತ್ತು ಒಬಿಸಿ ಸಹೋದರರ ಹಕ್ಕುಗಳಿಗಾಗಿ ತಾವು ಹೋರಾಡುತ್ತೇನೆ. ಮತ್ತು ಸಹೋದರಿಯರ ರಕ್ಷಣೆಗೆ ಸದಾ ಸಿದ್ದ ಎಂದು ತಿಳಿಸಿದ್ದಾರೆ
ಹಿಂದುಳಿದ ಸಮುದಾಯಗಳ ದೊಡ್ಡ ಬೆಂಬಲಿಗರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಅವರಿಗೆ ಮೋಸ ಮಾಡುತ್ತಿದೆ. ಪ್ರತಿಪಕ್ಷಗಳು ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳಾಗಿ ಪರಿವರ್ತಿಸುತ್ತಿವೆ. ಇದರಿಂದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿಯ ರಕ್ಷಣೆಯನ್ನ ತೆಗೆದು ಹಾಕುವ ಹುನ್ನಾರ ಮಾಡಿದೆ ಎಂದು ದೂರಿದ್ಧಾರೆ
ದೆಹಲಿಯಲ್ಲಿ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವನ್ನು ಅಲ್ಪಸಂಖ್ಯಾತ ಸಂಸ್ಥೆಯಾಗಿ ಗೊತ್ತುಪಡಿಸಲಾಯಿತು, ಇದರಿಂದಾಗಿ ಮೀಸಲಾತಿಗಳ ನಷ್ಟ ಪ್ರವೇಶ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರಿತುಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ರಕ್ಷಣೆಗಳ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ” ಎಂದು ಹೇಳಿದ್ದಾರೆ
ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಪ್ರಧಾನಿ ತಮ್ಮ ಕಳವಳ ವ್ಯಕ್ತಪಡಿಸಿದ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಅದು ಅವರಿಗೆ ಸ್ಪಷ್ಟವಾಯಿತು. ಕಾಂಗ್ರೆಸ್ ಪಕ್ಷವು ಏಪ್ರಿಲ್ ೫ ರಂದು ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ’ನ್ಯಾಯ ಪತ್ರದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯಲ್ಲಿ ಶೇಕಡಾ ೫೦ ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಉಲ್ಲೇಖಿಸಿದೆ ಎಂದಿದ್ದಾರೆ.