ಚಿರಂಜೀವಿ ಜೊತೆ ಆಶಿಕಾ ನಟನೆ
ಹೈದರಾಬಾದ್,ಮೇ.೨೬-ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದಿದ್ದಾರೆ. ಈಗ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಚಿರು ಅಭಿನಯಿಸುತ್ತಿರುವ ವಿಶ್ವಂಭರ ಚಿತ್ರದಲ್ಲಿ ಆಕರ್ಷಕ ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
ನಟಿ ಆಶಿಕಾ ರಂಗನಾಥ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಟಾಲಿವುಡ್ ಸಿನಿಮಾ ವಿಶ್ವಂಭರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಈಗಾಗಲೇ ನಟಿ ಆಶಿಕಾ ರಂಗನಾಥ್ ಅವರು ವಿಶ್ವಂಭರ ಸಿನಿಮಾದಲ್ಲಿ ತನ್ನ ಕೆಲಸ ಪೂರ್ಣಗೊಳಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ. ಯು ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಂಬಿಸಾರ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ವಿಶ್ವಂಭರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್ ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಆಶಿಕಾ ಆ ಬಳಿಕ ನಾ ಸಾಮಿ ರಂಗ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದಾರೆ.