ಪ್ಯಾರಿಸ್ ಫ್ಯಾಶನ್ ಸಪ್ತಾಹದಲ್ಲಿ ಆಲಿಯಾ
ಪ್ಯಾರಿಸ್,ಸೆ.೨೪-ಆಲಿಯಾ ಭಟ್ ಪ್ಯಾರಿಸ್ ಫ್ಯಾಶನ್ ವೀಕ್ ೨೦೨೪ ರಲ್ಲಿ ಹೊಸ ವರ್ಷ ಮತ್ತು ಹೊಸ ಮುಖವಾಗಿ ಪಾದಾರ್ಪಣೆ ಮಾಡಿದ್ದಾರೆ. ಆಲಿಯಾ ಭಟ್ ಪ್ಯಾರಿಸ್ ಫ್ಯಾಶನ್ ವೀಕ್ ೨೦೨೪ ರಲ್ಲಿ ತಮ್ಮ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಬಾರಿಗೆ ನಟಿ ರ್‍ಯಾಂಪ್ ಮೇಲೆ ಮಿಂಚಿದ್ದಾರೆ .
ಪ್ಯಾರಿಸ್ ಫ್ಯಾಶನ್ ವೀಕ್ ವುಮೆನ್ ರೆಡಿ-ಟು-ವೇರ್ ಸ್ಪ್ರಿಂಗ್-ಸಮ್ಮರ್ ೨೦೨೫ ಸಂಗ್ರಹದ ಭಾಗವಾಗಿ ಲೋರಿಯಲ್ ಪ್ಯಾರಿಸ್ ಶೋ ವಾಕ್ ಯುವರ್ ವರ್ತ್‌ಗಾಗಿ ಆಲಿಯಾ ಭಟ್ ಅವರು ಸೋಮವಾರ ಪ್ಯಾಲೈಸ್ ಗಾರ್ನಿಯರ್ (ಒಪೆರಾ ನ್ಯಾಷನಲ್ ಡಿ ಪ್ಯಾರಿಸ್) ಒಪೆರಾ ಹೌಸ್‌ನಲ್ಲಿ ರಚನೆಯನ್ನು ಪ್ರಸ್ತುತಪಡಿಸಿದ್ದಾರೆ. ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ಬೆಳ್ಳಿ ಲೋಹದ ಕಾರ್ಸೆಟ್ ನಟಿ ಧರಿಸಿದ್ದಾರೆ. ಕಾರ್ಯಕ್ರಮದ ವೇಳೆ ನಟಿ ಮೆಕ್ ಡೊವೆಲ್ ಜೊತೆ ಆಲಿಯಾ ಭಟ್ ರ಼್ಯಾಂಪ್ ವಾಕ್ ಮಾಡಿದ್ದಾರೆ.
ಕೇವಲ ೩೧ ವರ್ಷ ವಯಸ್ಸಿನ ಬಾಲಿವುಡ್ ನಟಿ ಆಲಿಯಾ ಭಟ್ ಪ್ಯಾರಿಸ್ ಫ್ಯಾಶನ್ ವೀಕ್ ೨೦೨೪ ರಲ್ಲಿ ಆಲಿಯಾ ಭಟ್ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಲು ಬಂದಿದ್ದಾರೆ. ಅವರಿಗಿಂತ ಮೊದಲು, ಐಶ್ವರ್ಯಾ ರೈ ಬಚ್ಚನ್ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷ, ಭಾರತದ ಐಶ್ವರ್ಯಾ ರೈ ಬಚ್ಚನ್ ಜೊತೆಗೆ, ಆಲಿಯಾ ಭಟ್ ಕೂಡ ಪ್ಯಾರಿಸ್ ಫ್ಯಾಶನ್ ವೀಕ್ ೨೦೨೪ ಈವೆಂಟ್ ಅಲಂಕರಿಸಿದ್ದಾರೆ.
ಕಳೆದ ವರ್ಷ ಆಲಿಯಾ ಭಟ್ ಗಾಲ್ ಗಡೋಟ್ ಅವರ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದಲ್ಲದೆ, ಕರಣ್ ಜೋಹರ್ ಅವರ ಹಿಟ್ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣವೀರ್ ಸಿಂಗ್, ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರೊಂದಿಗೆ ಕೆಲಸ ಮಾಡಿದರು. ಇದರೊಂದಿಗೆ ಆಲಿಯಾ ಭಟ್ ಮುಂದಿನ ದಿನಗಳಲ್ಲಿ ಜಿಗ್ರಾ ಮತ್ತು ಲವ್ ಅಂಡ್ ವಾರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.