ಅವನು ನನ್ನ ಮಗನನ್ನು ಕೊಂದಿದ್ದಾನೆ: ತಾಯಿ ಅಳಲು
ಪುಣೆ ಮೇ.೨೪- ಅವನು ನನ್ನ ಮಗನನ್ನು ಕೊಂದಿದ್ದಾನೆ. ಈಗ ನಾನು ನನ್ನ ಮಗನನ್ನು ಭೇಟಿಯಾಗಲು ಸಾಧ್ಯವಿಲ್ಲ ಪೋರ್ಷೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಅನೀಶ್ ಅವಧಿಯಾ, ತಾಯಿ ಸವಿತಾ ಅವಧಿಯಾ ಅವರು ನೋವಿನ ನುಡಿಗಳಿವು..
ಮಗನನ್ನು ಕೊಂದ ಕಾರು ಚಾಲಕನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಇದು ಯಾವ ನ್ಯಾಯ ಎಂದು ಅವರು ಅತೃಪ್ತಿ ಅಸಮಾಧಾನ ಹೊರ ಹಾಕಿದ್ದಾರೆ.
ಪೊಲೀಸರ ವಿಚಾರಣೆ ಸಮಯದಲ್ಲಿ ಪ್ರತಿಕ್ರಿಯಿಸಿದ ಸವಿತಾ ಅವಧಿಯಾ, ಇದು ಹುಡುಗನ ತಪ್ಪು, ನೀವು ಅದನ್ನು ಕೊಲೆ ಎಂದೂ ಕರೆಯಬಹುದು, ಏಕೆಂದರೆ ಅವನು ಅಂತಹ ದೊಡ್ಡ ತಪ್ಪು ಮಾಡದಿದ್ದರೆ, ಯಾರೂ ಸಾಯುತ್ತಿರಲಿಲ್ಲ. ಅವರ ಕುಟುಂಬ ಸದಸ್ಯರು ಮಾತ್ರ ಗಮನ ಹರಿಸಿದ್ದರೆ, ಇಂದು ನನ್ನ ಮಗ ಜೀವಂತವಾಗಿರುತ್ತಿದ್ದನು ಇದು ನೇರ ಕೊಲೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಗ ಮತ್ತು ಇನ್ನೊಬ್ಬನ್ನು ಕೊಂಡ ಆರೋಪಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು. ಶ್ರೀಮಂತ ವ್ಯಕ್ತಿಗಳನ್ನು ಏನೂ ಬೇಕಾದರೂ ಮಾಡುತ್ತಾರೆ. ಆದರೆ ದೇಶದ ಕಾನೂನು ಎಲ್ಲರಿಗೂ ಒಂದೆ ಹೀಗಾಗಿ ನಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು.
ಈ ಘಟನೆಯ ಬೆನ್ನಲ್ಲೇ ಪುಣೆಯ ನ್ಯಾಯಾಲಯ ಪೋರ್ಷೆ ಕಾರು ಚಾಲನೆ ಮಾಡಿ ಇಬ್ಬರು ಸಾಪ್ಟ್ ವೇರ್ ಇಂಜಿನಿಯರ್ ಸಾವಿಗೆ ಕಾರಣರಾದ ಬಾಲಪರಾಧಿಯ ಜಾಮೀನು ರದ್ದು ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದೆ.
೧೭ ವರ್ಷದ ಪುಣೆ ಹುಡುಗ, ತನ್ನ ೧೨ ನೇ ತರಗತಿಯ ಫಲಿತಾಂಶದ ಸಂಭ್ರಮದಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.