ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ತಪ್ಪಿದ ದುರಂತ
ಕೇದಾರನಾಥ.ಮೇ.೨೪- ಗಾಳಿಯಲ್ಲೆ ಕೆಟ್ಟು ನಿಂತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ಕೇದಾರನಾಥದಲ್ಲಿ ನಡೆದಿದೆ. ಇದರಿಂದಾಗಿ ಭಾರೀ ದುರಂತ ತಪ್ಪಿದೆ.
ಕೇದಾರನಾಥಕ್ಕೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ತಕ್ಷಣವೇ ಹೆಲಿಕಾಪ್ಟರ್ ಅನ್ನು ಲ್ಯಾಂಡಿಂಗ್ ಮಾಡಲಾಯಿತು.
ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೆಲಿಕಾಪ್ಟರ್‌ನಲ್ಲಿ ೬ ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಚಾರ್‌ಧಾಮ್ ಯಾತ್ರೆ ಮುಂದುವರೆದಿದ್ದು ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ.ಗಂಗೋತ್ರಿ-ಯಮುನೋತ್ರಿ ಧಾಮಕ್ಕೆ ೩ಲಕ್ಷ ೪೦ ಸಾವಿರ ಯಾತ್ರಿಕರು ಭೇಟಿ
ನೀಡಿದ್ದಾರೆ. ಗಂಗೋತ್ರಿ ಧಾಮಕ್ಕೆ ೧ಲಕ್ಷದ ೫೧ ಸಾವಿರ ಮಂದಿ ದರ್ಶನ ಪಡೆದಿದ್ದಾರೆ. ಬದರಿನಾಥಕ್ಕೆ ೧ಲಕ್ಷ ೭೭ ಸಾವಿರದ ೭೪೯ ಭಕ್ತರು ಬದರಿನಾಥ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.