ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ
ಬಳ್ಳಾರಿ, ಮೇ ೨೪- ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ದೇಶದ ಚುನಾವಣೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಟಿಎಂ ಆಗಿದೆ. ಲೋಕಸಭೆ ಚುನಾವಣೆಗೆ ಹಣ ಕಳುಹಿಸೋದು ಬಿಟ್ರೇ ಯಾವುದೇ ಒಳ್ಳೆಯ ಕೆಲಸ ಈ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದರು.
ಅವರು ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದೊಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಬಸ್‌ಗಳಿಗೆ ಡಿಸೈಲ್ ಇಲ್ಲ, ಶಿಕ್ಷಕರಿಗೆ, ನೌಕರರಿಗೆ ಸಂಬಳ ಆಗ್ತಿಲ್ಲ. ಆಸ್ಪತ್ರೆಯಲ್ಲಿ ಔಷಧಿ ಇಲ್ಲ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಸುಲಿಗೆ ,ಅನ್ಯಾಯ ಇದರ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಮಾಡಲಾಗಿದೆ ಎಂದು ಹೇಳಿದರು.
ಬಾಂಬ್ ಸ್ಪೋಟವನ್ನು ಸಿಲಿಂಡರ್ ಸ್ಪೋಟ ಅಂತಾರೆ. ಎನ್‌ಐಎ ಆರೋಪಿಗಳ ಬಂಧನ ಬಳಿಕ ಕಾಂಗ್ರೆಸ್ ಮುಖಭಂಗ ಆಗಿದೆ ಎಂದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಘಟನೆ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ಹಾಗೂ ಇತರೆ ಕಾರ್ಯಕರ್ತ ಮೇಲೆ ಕೇಸ್ ಮಾಡ್ತಾರೆ.
ರಾಜ್ಯದಲ್ಲಿ ಅದಕ್ಷ ಶಿಕ್ಷಣ ಸಚಿವರನ್ನು ಶಿಕ್ಷಕರು ನೋಡ್ತಿದ್ದಾರೆ. ಕರ್ನಾಟಕದಲ್ಲಿದ್ದು ಕನ್ನಡ ಬರೋದಿಲ್ಲ ಅಂತಾರೇ ಮೋದಿಗೆ ಕನ್ನಡ ಬರುತ್ತಾ ಅಂತಾ ಪ್ರಶ್ನೆ ಮಾಡ್ತಾರೆ. ಅಹಂಕಾರ, ಅಜ್ಞಾನ, ಮೂರ್ಖತನ ಮಾತು ಶಿಕ್ಷಣ ಮಂತ್ರಿ ಹೇಳುತ್ತಾರೆ ಎಂದರು.
ವರ್ಷದ ಅವಧಿಯಲ್ಲಿ ಒಂದೂ ಕಿ.ಮೀ ರಸ್ತೆ ಮಾಡಿಲ್ಲ. ಇದು ಸರ್ಕಾರದ ದಿವಾಳಿತಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಚುನಾವಣೆ ನಂತರ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಥನವಾಗಲಿದೆ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿದ ಸಚಿವ ಪ್ರಹ್ಲಾದ ಜೋಷಿ, ಏಕನಾಥ ಶಿಂಧೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.
ಜನರು ಅಧಿಕಾರ ಕೊಟ್ಟಿದ್ದಾರೆ ಸರಿಯಾಗಿ ನಡೆಸಿಕೊಳ್ಳಲಿ ಆದರೆ, ಅವರ ಸರ್ಕಾರದಲ್ಲಿ ಆಂತರಿಕವಾಗಿ ಗೊಂದಲ ಬಹಳ ಇದೆ. ಅಧ್ಯಕ್ಷರ ಬದಲಾವಣೆ, ಮೂವರು ಡಿಸಿಎಂ ಆಗಬೇಕು. ಎನ್ನುವುದು ಸೇರಿದಂತೆ ಹಲವು ಗೊಂದಲ ಇವೆ ಇದು ಕಾಂಗ್ರೆಸ್ ಒಳಬೆಗುದಿ ಸೂಚಿಸುತ್ತದೆ. ಏನಾಗುತ್ತೋ ನನಗೆ ಗೊತ್ತಿಲ್ಲ
೫ ವರ್ಷ ಸರ್ಕಾರ ಮುಂದುವರೆಲಿ.
ಎನ್ನುವದು ನಮ್ಮ ಅಪೇಕ್ಷೆ.
ಕಾಂಗ್ರೆಸ್ ಆಂತರಿಕ ಭಿನ್ನಮತದಿಂದ ಸರ್ಕಾರ ಬಿದ್ರೇ. ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು.