ಕೈ ಅಭ್ಯರ್ಥಿ ಪರ ಎಸ್‌ಟಿಎಸ್ ಮತಯಾಚನೆ
ಕೆಂಗೇರಿ,ಮೇ.೨೪: ನನ್ನ ಮೇಲೆ ಯಾವುದೇ ಕಾಮೆಂಟ್ ಮಾಡಿದ್ದರು ತಲೆಕೆಡಿಸಿಕೊಳ್ಳುವುದಿಲ್ಲ ಶಿಕ್ಷಕರು ಪದವೀಧರ ಸೇವೆ ಮುಖ್ಯವಾಗಿದ್ದು. ಜನ ಸೇವೆ, ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರ ಗೆಲುವಿಗಾಗಿ ಮುಂದಾಗಬೇಕೆಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮನವಿ ಮಾಡಿದರು.
ಮಾಗಡಿ ರಸ್ತೆಯ ಬಿಇಎಲ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಪದವೀಧರರ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ನಮ್ಮ ಹಿತೈಷಿಗಳು, ಸ್ನೇಹಿತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಶಿಕ್ಷಕರ ವಿಷಯದಲ್ಲಿ ಪುಟ್ಟಣ್ಣ. ಪದವೀಧರ ಪರವಾಗಿ ಧ್ವನಿ ಎತ್ತಲು ರಾಮೋಜಿಗೌಡರನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತ ರಾಯಪ್ಪ ಅಧಿಕಾರವಿಲ್ಲದಿದ್ದರು. ಸಾವಿರಾರು ಪದವೀಧರರಿಗೆ ಉದ್ಯೋಗ ದೊರಕಿಸಿ ಕೊಟ್ಟು ಸಮಾಜ ಸೇವೆ ಮಾಡುತ್ತಿರುವ ರಾಮೋಜಿ ಗೌಡರನ್ನು ಗೆಲ್ಲಿಸುವ ಮೂಲಕ ಪದವೀಧರರನ್ನು ಉದ್ಯೋಗ ನೀಡಲು ಸಹಕರಿಸುವಂತೆ ಮನವಿ ಮಾಡಿದರು. ಬೆಂಗಳೂರು ಪದವೀಧರರು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಮಾತನಾಡಿ ಎರಡು ಚುನಾವಣೆಯಲ್ಲಿ ಪರಾಭವಗೊಂಡರು ಮನೆಯಲ್ಲಿ ಕೂರದೆ ಉದ್ಯೋಗ ಮೇಳ ನಡೆಸಿ ೯ ಸಾವಿರ ಉದ್ಯೋಗ ದೊರಕಿಸಿ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಸಾವಿರಾರು ಪದವೀಧರರಿಗೆ ಸಹಾಯ ಮಾಡಲು ಒಮ್ಮೆ ಅವಕಾಶ ಮಾಡಿಕೊಡಿ ಎಂದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ ಅಭಿವೃದ್ಧಿ ಮಾಡದ. ಪದವೀಧರರಿಗೆ ಯಾವುದೇ ಸಹಾಯ ಮಾಡದ ಬಿಜೆಪಿ, ಜೆಡಿಎಸ್ ಸೋಲಿಸುವ ಮೂಲಕ. ರಾಮೋಜಿ ಗೌಡರನ್ನು ಗೆಲ್ಲಿಸುವ ಮೂಲಕ ತಮ್ಮ ತಾಕತ್ತನ್ನು ಈ ಬಾರಿ ತೋರಿಸಿ ಎಂದರು.
ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪಶ್ಚಿಮ ವಿಭಾಗದ ಅಧ್ಯಕ್ಷ ಹನುಮಂತರಾಯಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಒಬೇದುಲ್ಲಾ ಷರೀಫ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ. ಆನಂದಸ್ವಾಮಿ, ಕೆ. ಎಸ್. ಪರ್ವೀಜ್, ಕುಂಬಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಕೃಷ್ಣ,ಉಪಾಧ್ಯಕ್ಷ ಗೋಪಾಲಕೃಷ್ಣ,ದೊಡ್ಡಬೆಲೆ ಪಿ. ನಾಗೇಶ್, ಬಿ. ಎಚ್. ಪ್ರಭು, ಎಂಪಿಸಿಎಸ್ ಅಧ್ಯಕ್ಷ ವಿ. ವೇಣುಗೋಪಾಲ್, ತಾ. ಪಂ. ಮಾಜಿ ಅಧ್ಯಕ್ಷ ಬಿ. ಅನಿಲ್ ಕುಮಾರ್, ವಿ. ರಘು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ರಾಮಮೂರ್ತಿ, ತರುಳು ಷಣ್ಮುಖ, ಕೆಂಚನಪುರ ತಿಮ್ಮೇಗೌಡ, ಪ್ರಕಾಶ್, ಅಪ್ಪಿ, ನಿಖಿಲ್ ಗೌಡ, ನಾಗವೇಣಿ, ಬೆಂಗಳೂರುಉತ್ತರ ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಜಿ.ಎಸ್. ಪುಟ್ಟೇಗೌಡ ಮತ್ತಿತರರು. ಉಪಸ್ಥಿತರಿದ್ದರು.