ರಾಹುಲ್ ಪ್ರಶ್ನಾತೀತ ನಾಯಕ
ನವದೆಹಲಿ,ಮೇ.೨೨- ಪಕ್ಷದ ನಾಯಕ “ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಅತ್ಯಂತ ಜನಪ್ರಿಯ ಮತ್ತು ಪ್ರಶ್ನಾತೀತ ನಾಯಕ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಇಂದಿಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಜವಾಹರಲಾಲ್ ನೆಹರು ಕುರಿತು ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರ ಟೀಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿದ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಎಲ್ಲರೂ ಸ್ವತಂತ್ರರು ಎನ್ನುವುದನ್ನು ತಿಳಿಯಬೇಕು. ರಾಹುಲ್ ಗಾಂಧಿ ನಮ್ಮ ಪಕ್ಷದ ಪಕ್ಷಾತೀತನಾಯಕ ಎಂದು ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೧೯೫೨ ರಲ್ಲಿ ಫಿರೋಜ್ ಗಾಂಧಿ ಮೊದಲು ಆಯ್ಕೆಯಾದಾಗಿನಿಂದ ರಾಯ್ ಬರೇಲಿ ಅದು ಅವರ ಕುಟುಂಬದ ವಶದಲ್ಲಿದೆ. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ತೆರಳಿದ ನಂತರ ತೆರವಾಸ ಸ್ಥಾನದಲ್ಲಿ ಅವರು ಸ್ಪರ್ಧೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ವಿಚಲಿತರಾಗುವ ಬಿಜೆಪಿ ಜನರ ದೃಷ್ಠಿಕೋನವನ್ನು ಬೇರೆ ಕಡೆ ತಿರುಗಿಸಲು ಪ್ರಯತ್ನ ನಡೆಸುತ್ತಿದೆ. ನಿರುದ್ಯೋಗ, ಹಣದುಬ್ಬರ ಸಾಮಾನ್ಯ ಜನರ ಜೀವನ ಮೇಲೆ ಪರಿಣಾಮ ಬೀರಿದೆ, ಬಿಜೆಪಿ ನಾಯಕರಿಗೆ ಇದರ ಬಗ್ಗೆ ಚಿಂತೆ ಇಲ್ಲ. ರಾಹುಲ್ ಗಾಂಧಿ ಸ್ಪರ್ಧೆ ಮಾಡಿದರೆ ಅದರ ಬಗ್ಗೆ ಅವರಿಗೆ ಕಾಳಜಿ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿ ಮನೋ ವ್ಯಾಕುಲತೆಯಿಂದ ಬಳಲುತ್ತಿದೆ. ನಿಜವಾದ ಸಮಸ್ಯೆಗಳಿಂದ ವಿಚಲಿತಗೊಳಿಸಬೇಡಿ, ಯಾರ ಹಿತಾಸಕ್ತಿಯನ್ನು ಪೂರೈಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಎಎಪಿ ಈ ವಿಷಯದ ಬಗ್ಗೆ ಹೇಳಿಕೆ ನೀಡಿದೆ, ಅವರ ಪಕ್ಷದ ಆಂತರಿಕ ವಿಷಯದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಎಎಪಿ ಪಕ್ಷದ ಆಂತರಿಕ ವಿಷಯವನ್ನು ಮತ್ತೆ ಮತ್ತೆ ಎತ್ತುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ ಅದನ್ನು ಬಿಟ್ಟು ನಿರುದ್ಯೋಗ, ಹಣದುಬ್ಬರ ದೇಶದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆ. ೧೪೦ ಕೋಟಿ ಭಾರತೀಯರ ಭವಿಷ್ಯದ ಬಗ್ಗೆ ಚಿಂತಿಸಿ ಎಂದು ತಿರುಗೇಟು ನೀಡಿದ್ದಾರೆ.