ಮತದಾನ ಗೂಗಲ್ ನಿಂದ ವಿಶೇಷ ಅಭಿಯಾನ
ನವದೆಹಲಿ,ಮೇ.೨೦- ಲೋಕಸಭೆ ಚುನಾವಣೆಯಲ್ಲಿ ಐದನೇ ಹಂತದ ಮತದಾನದ ಹಬ್ಬ ಆಚರಿಸುವ ಸಮಯದಲ್ಲಿ ಗೂಗಲ್ ಸಂಸ್ಥೆ, ತನ್ನ ಡೂಡಲ್‌ನೊಂದಿಗೆ ಭಾರತದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾರರು ಪಾಲ್ಗೊಳ್ಳುವಂತೆ ವಿಶೇಷ ಅಭಿಯಾನ ಆರಂಭಿಸಿದೆ.
ಡೂಡಲ್ ತನ್ನ ಮುಖಪುಟದಲ್ಲಿ ಗೂಗಲ್‌ನ ಐಕಾನಿಕ್ ಲೋಗೋ ಬದಲಿಸುವ ಮೂಲಕ ಭಾರತದಲ್ಲಿ ಮತದಾನದ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಶಾಯಿಯಿಂದ ಗುರುತಿಸಲ್ಪಟ್ಟ ತೋರು ಬೆರಳು ಪ್ರದರ್ಶಿಸಿ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಸಂದೇಶ ಸಾರಿದೆ.
ಡೂಡಲ್ ಅನ್ನು ಕ್ಲಿಕ್ ಮಾಡಿದ ನಂತರ, ಭಾರತದ ೧೮ನೇ ಸಾರ್ವತ್ರಿಕ ಚು ಹುಡುಕಾಟ ಫಲಿತಾಂಶಗಳಿಗೆ ಬಳಕೆದಾರರನ್ನು ಬಳಿಸಿಕೊಂಡಿದೆ. ಈ ಮೂಲಕ ಮಹತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದೆ.
ಏಳು ಹಂತದ ಲೋಕಸಭೆ ಚುನಾವಣೆಯ ಭಾಗವಾಗಿರುವ ಐದನೇ ಹಂತದ ಮತದಾನದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ೪೯ ಕ್ಷೇತ್ರಗಳಲ್ಲಿ ಮತದಾನ ಬಿಗಿ ಭದ್ರತೆಯಲ್ಲಿ ಪ್ರಗತಿಯಲ್ಲಿದೆ.
ಇವುಗಳಲ್ಲಿ ಜಾರ್ಖಂಡ್ ೩ ಕ್ಷೇತ್ರಗಳು, ಒಡಿಶಾ ೫, ಉತ್ತರ ಪ್ರದೇಶ ೧೪, ಬಿಹಾರ ೫, ಮಹಾರಾಷ್ಟ್ರ ೧೩, ಪಶ್ಚಿಮ ಬಂಗಾಳ ೭, ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ತಲಾ ೧ ಕ್ಷೇತ್ರಗಳಿಗೆ ಮತದಾನ ನಡೆದಿದೆ
ಗೂಗಲ್ ಡೂಡಲ್‌ಗಳು ರಜಾದಿನಗಳು, ಈವೆಂಟ್‌ಗಳು, ಸಾಧನೆಗಳು ಮತ್ತು ಗಮನಾರ್ಹ ವ್ಯಕ್ತಿಗಳನ್ನು ಆಚರಿಸಲು ವಿನ್ಯಾಸಗೊಳಿಸಲಾದ ಲೋಗೋದ ತಾತ್ಕಾಲಿಕ ಬದಲಾವಣೆಗಳಾಗಿವೆ. ಈ ಸೃಜನಾತ್ಮಕ ಬದಲಾವಣೆಗಳು ಸ್ಥಳೀಯ ಮತ್ತು ಜಾಗತಿಕ ವಿಷಯಗಳಿಗೆ ಒತ್ತು ನೀಡಿದೆ