ಬಜೆಟ್ ವಿಭಜನೆ ಅತಿರೇಕದ ಆರೋಪ
ನವದೆಹಲಿ,ಮೇ೧೬:ಮುಸ್ಲಿಂ ಬಜೆಟ್, ಹಿಂದೂ ಬಜೆಟ್ ಎಂದು ವಿಭಜಿಸುವ ಮೂಲಕ ತಮ್ಮ ಮತ ಬ್ಯಾಂಕ್‌ನ್ನು ಕಾಂಗ್ರೆಸ್ ಸಮಾಧಾನಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎನ್ನುವ ಪ್ರಧಾನಿ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ, ಪ್ರಧಾನಿಯವರ ಹೇಳಿಕೆಗಳು ವಿಲಕ್ಷಣವಾಗಿದೆ. ಅವರ ಭಾಷಣ ಬರಹಗಾರರು ತಮ್ಮ ಸಮತೋಲನವನ್ನು ಕಳೆದುಕೊಂಡಿದ್ದಾರೆಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಬಜೆಟ್‌ನ ಶೇ. ೧೫ ರಷ್ಟನ್ನು ಮುಸ್ಲಿಮರಿಗೆ ಮಾತ್ರ ಮೀಸಲಿಡಲು ಮನಮೋಹನ್‌ಸಿಂಗ್ ಯೋಜನೆ ರೂಪಿಸಿದ್ದಾರೆ ಎನ್ನುವ ಪ್ರಧಾನಿಯವರ ಅರೋಪ ಸಂಪೂರ್ಣ ಸುಳ್ಳಾಗಿದೆ. ಕಾಂಗ್ರೆಸ್ ಮುಸ್ಲಿಂ ಬಜೆಟ್ ಮತ್ತು ಹಿಂದೂ ಬಜೆಟ್ ಮಂಡಿಸಲಿದೆಎನ್ನುವ ಪ್ರಧಾನಿ ಅವರ ಆರೋಪ ಅತಿರೇಕದ ಸಂಗತಿ. ಕೇವಲ ಭ್ರಮೆ ಎಂದು ಮಾಜಿ ಹಣಕಾಸು ಸಚಿವ ಚಿದಂಬರಂ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಮುಂಬರುವ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಆರೋಪಗಳು ಮತ್ತು ಅತಿರೇಖದ ಹೇಳಿಕೆಗಳನ್ನು ನೀಡುತ್ತಿರುವುದು ಮೋದಿ ಅವರ ಉತ್ಸಾಹ, ಭರವಸೆ ಎಂದು ಹೇಳಿದ್ದಾರೆ.
ಪ್ರಧಾನಿ ಅವರ ಹೇಳಿಕೆಗಳು ಜಾಗತಿಕ ವೇದಿಕೆಯಲ್ಲಿ ಭಾರತದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಬಿಂಬಿಸಲು ಸಾಧ್ಯವಿಲ್ಲ. ಭಾರತೀಯ ಜನರು ಮಾತ್ರವಲ್ಲದೆ ಇಡೀ ಜಗತ್ತು ಭಾರತದ ಪ್ರಧಾನಿಯವರ ಹೇಳಿಕೆಗಳನ್ನು ಗಮನಿಸುತ್ತಿದೆ ಮತ್ತು ವಿಶ್ಲೇಷಿಸುತ್ತಿದೆ ಮತ್ತು ಭಾರತಕ್ಕೆ
ಅಪಕೀರ್ತಿ ತರಲಿದೆ ಎಂದು ತಿಳಿಸಿದ್ದಾರೆ.
ಬಜೆಟ್ ವಿಭಜನೆ ಮತ್ತು ಧರ್ಮದ ಆಧಾರದ ಮೇಲೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಜಾರಿಯನ್ನು ತಡೆಯುವುದಾಗಿ ಭರವಸೆ ನೀಡಿದ ಚಿದಂಬರಂ ಅವರು ಧಾರ್ಮಿಕ ಆಧಾರದ ಬಜೆಟ್ ಸರಿಯಲ್ಲ ಎಂದಿದ್ದಾರೆ.