ಚು. ಆಯೋಗ ಸ್ವತಂತ್ರ ಕಾರ್‍ಯನಿರ್ವಹಣೆ
ಕೈಗೆ ಮೋದಿ ತಿರುಗೇಟು
ನವದೆಹಲಿ,ಮೇ.೧೭-ಚುನಾವಣಾ ಆಯೋಗವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟು ಕೊಂಡಿದ್ದಾರೆ ಎಂಬ ಪ್ರತಿಪಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಆಯೋಗ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯ ಚುನಾವಣಾ ಆಯುಕ್ತರು ನಿವೃತ್ತಿಯ ನಂತರ ರಾಜಕೀಯಕ್ಕೆ ಬಂದು ಸಚಿವರಾದ ಉದಾಹಣೆ ಇಲ್ಲವೇ, ಅವರ ಕಾಲದಲ್ಲಿ ಆದದ್ದನ್ನು ಈಗಲೂ ಅದೇ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಅವರು ತಿಳಿಸಿದ್ದಾರೆ.
ಚುನಾವಣಾ ಆಯುಕ್ತರಾಗಿ ನಿವೃತ್ತರಾದವರಲ್ಲಿ ಕೆಲವು ರಾಜ್ಯಪಾಲರಾಗಿದ್ದಾರೆ, ಇನ್ನೂ ಕೆಲವರು ಕೇಂದ್ರ ಸಚಿವರಾಗಿದ್ದಾರೆ. ಸಂಸದರೂ ಆಗಿಲ್ಲವೇ, ನಾವು ಆ ರೀತಿ ಮಾಡಿದರೆ ಚುನಾವಣಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ ಎಂದು ದೂರಿದರು.
ಕಾಂಗ್ರೆಸ್ ಆಡಳಿತದಲ್ಲಿ ನಿವೃತ್ತಿಯ ನಂತರ ಮುಖ್ಯ ಚುನಾವಣಾ ಆಯುಕ್ತರು ರಾಜಕೀಯಕ್ಕೆ ಮತ್ತು ಸಚಿವ ಸ್ಥಾನಗಳನ್ನು ಅಲಂಕರಿಸಿದ ಉದಾಹರಣೆ ಕಣ್ಣ ಮುಂದೆ ಇದೆ. ೫೬ ವರ್ಷಗಳ ಕಾಲ ಚುನಾವಣಾ ಆಯೋಗ ಏಕಸದಸ್ಯ ಘಟಕವಾಗಿತ್ತು ಎಂದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಸ್ಥಾನದಿಂದ ನಿವೃತ್ತಿಗೊಂಡಿದ್ದ ಟಿಎನ್ ಶೇಷನ್ ಅವರು ಎಲ್ ಕೆ ಅಡ್ವಾಣಿ ವಿರುದ್ಧ ಸ್ಪರ್ಧೆ ಮಾಡಿದ್ದರು.
ಹಿಂದಿನ ಸರ್ಕಾರಗಳಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ ಉದಾಹರಣೆಗಳಾಗಿವೆ. ಆ ಕಾಲದ ಚುನಾವಣಾ ಆಯುಕ್ತರು, ಈಗ ನಿವೃತ್ತರಾಗಿದ್ದಾರೆ, ಈಗಲೂ ಅದೇ ರಾಜಕೀಯ ತತ್ವವನ್ನು ಪ್ರಚಾರ ಮಾಡುತ್ತಾ ಟ್ವೀಟ್ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಮುಖ್ಯ ಆಯುಕ್ತರಾಗಿದ್ದ ಟಿಎನ್ ಶೇಷನ್ ಅವರು ಎಲ್ ಕೆ ಅಡ್ವಾಣಿ ಮತ್ತು ಎಂಎಸ್ ಗಿಲ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ನಂತರ ಯುಪಿಎ ಆಡಳಿತದಲ್ಲಿ ಕೇಂದ್ರ ಸಚಿವರೂ ಆಗಿದ್ದರು ಎಂದರು.
ಸಂವಿಧಾನ ಬದಲು ಮಾಡಿದ್ದೇ ಕಾಂಗ್ರೆಸ್
ಬಿಜೆಪಿಗೆ ೪೦೦ಕ್ಕೂ ಅಧಿಕ ಸ್ಥಾನ ಬಂದರೆ ಸಂವಿಧಾನವನ್ನು ಬದಲಾಯಿಸಲು ಉದ್ದೇಶಿಸಲಾಗಿದೆ ಎಂಬ ವಿರೋಧ ಪಕ್ಷದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, “ಈ ದೇಶದಲ್ಲಿ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದಿದ ವ್ಯಕ್ತಿ ಯಾರು ಅದು ಪಂಡಿತ್ ನೆಹರೂ. ಅವರು ತಂದ ತಿದ್ದುಪಡಿಗಳು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿದ್ದವು, ಇದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ವಿರುದ್ಧವಾಗಿತ್ತು ಎಂದು ಟೀಕಿಸಿದರು.
ಅದರ ನಂತರ ಇಂದಿರಾ ಗಾಂಧಿ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದರು ಮತ್ತು ತುರ್ತು ಪರಿಸ್ಥಿತಿ ಹೇರಿದರು. ರಾಜೀವ್ ಗಾಂಧಿ ಅವರು ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಿದರು ಮತ್ತು ಮಾಧ್ಯಮದ ಮೇಲೆ ನಿರ್ಬಂಧಗಳನ್ನು ಹೇರಿದರು. ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಒಮ್ಮೆ ಕೇಂದ್ರ ಸಂಪುಟದ ನಿರ್ಧಾರವನ್ನು ಹರಿದು ಹಾಕಿದ್ದನ್ನು ನೆನಪು ಮಾಡಿದ್ದಾರೆ.