ಪ್ರಜ್ವಲ್ ಪರ ಮೋದಿ ಪ್ರಚಾರ: ಕೇಜ್ರಿ ಕಿಡಿ
ನವದೆಹಲಿ,ಮೇ೧೬:ಪ್ರಜ್ವಲ್‌ರೇವಣ್ಣ ಅವರು ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ, ಪ್ರಧಾನಿ ಮೋದಿ ಪ್ರಜ್ವಲ್ ಪರ ಮತ ಕೇಳಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪಿಸಿದರು.
ಅವರಿಂದು ಬಿಎಸ್ಪಿ ನಾಯಕ ಅಖಿಲೇಶ್‌ಯಾದವ್‌ರೊಂದಿಗೆ ಲಖನೌದಲ್ಲಿ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಣಿಪುರ ಘಟನೆ ಕುರಿತಂತೆ ಇಡೀ ದೇಶವೆ ನೋವು ಅನುಭವಿಸಿದೆ. ಆದರೆ, ಪ್ರಧಾನಿ ಮೋದಿ ಮೌನಕ್ಕೆ ಮೊರೆ ಹೋಗಿದ್ದಾರೆ.
ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಹ ದೆಹಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್ ಈ ವೇಳೆ ನಿರಾಕರಿಸಿದರು.
ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಹಲ್ಲೆ ನಡೆಸಿರುವ ಕುರಿತು ಕಳೆದೆರೆಡು ದಿನಗಳ ಹಿಂದೆ ಆರೋಪಿಸಲಾಗಿತ್ತು.
ಈ ಸಂಬಂಧ ಮಾಧ್ಯಮದವರು ಪ್ರತಿಕ್ರಿಯಿಸುವಂತೆ ಕೇಳಿದಾಗ ಕೇಜ್ರಿವಾಲ್ ನಿರಾಕರಿಸಿದ ವೇಳೆ ಮಾತನಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ಯಾದವ್ ಮಲಿವಾಲ್ ಅವರ ವಿಷಯಕ್ಕಿಂತಲೂ ಹೆಚ್ಚು ಗಂಭೀರವಾದ ಸಮಸ್ಯೆಗಳು ದೇಶದಲ್ಲಿವೆ ಎಂದಿದ್ದಾರೆ.
ಈ ಮೂಲಕ ಕೇಜ್ರಿವಾಲ್ ಹಾಗೂ ಅಖಿಲೇಶ್‌ಯಾದವ್ ಸ್ವಾತಿಮಲಿವಾಲ್ ವಿಷಯ ಕುರಿತಂತೆ ಹಲ್ಲೆ ಆರೋಪ ಎದುರಿಸುತ್ತಿರುವ ಎಎಪಿ ಸಂಸದ ಸಂಜಯ್‌ಸಿಂಗ್ ಅವರ ರಕ್ಷಣೆಗೆ ಮುಂದಾಗಿದ್ದಾರೆ ಮತ್ತು ಇಂತಹ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸೂಕ್ತ ಎಂದಿದ್ದಾರೆ.
ಎಎಪಿ ಸಂಘಟಿತ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು, ಎಎಪಿ ಸಮ್ಮೇಳನ ಸಮಯದಲ್ಲಿ ಮಣಿಪುರ ಪರಿಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದರು.
ನಮ್ಮ ಕುಸ್ತಿಪಟುಗಳು ಲೈಂಗಿಕ ಶೋಷಣೆ ವಿರುದ್ಧ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ವಾತಿ ಮಲಿವಾಲ್ ಡಿಸಿಡಬ್ಲ್ಯು ಮುಖ್ಯಸ್ಥರಾಗಿದ್ದರು ಹಾಗೂ ಆ ವಿಷಯಗಳ ಕುರಿತಂತೆ ಮೌನವಾಗಿದ್ದರು. ಬಿಜೆಪಿಯವರು ಸ್ವಾತಿ ಮಲಿವಾಲ್‌ರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಹಾಗೂ ಅದು ಅವರ ಸಮಸ್ಯೆ ಎಂದು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.