ಸೀಟಿಗಾಗಿ ಮಹಿಳೆಯರ ಬಡಿದಾಟ
ಬೀದರ್.ಮೇ.೧೫- ಸರ್ಕಾರಿ ಬಸ್‌ಗಳಲ್ಲಿ ಸೀಟಿಗಾಗಿ ಹೊಡೆದಾಟ ಪ್ರಕರಣಗಳು ಮುಂದುವರೆದಿದ್ದು ಇದೀಗ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ.
ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೀದರ್‌ನಿಂದ ಕಲಬುರಗಿ ಬಸ್‌ನಲ್ಲಿಇಬ್ಬರು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದಿದ್ದರು. ಟಿಕೆಟ್ ಪಡೆದ ನಂತರ ಮಹಿಳೆಯರು ಸೀಟಿಗಾಗಿ ಕಿತ್ತಾಟ ನಡೆಸಿದ್ದಾರೆ.
ಓರ್ವ ಮಹಿಳೆ, ಸೀಟು ಬಿಡು, ಇದು ನನ್ನದು ಎಂದು ಹೇಳಿದ್ದಾಳೆ ಆಗ ಮತ್ತೊಬ್ಬಳು, ನಾನು ಸೀಟ್ ಬಿಡಲ್ಲ. ಏನ್ ಮಾಡುತ್ತಿಯಾ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾಳೆ.
ಗಲಾಟೆ ಮಿತಿಮೀರಿ ಹೋದಾಗ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಸಿಟ್ಟಿನಲ್ಲಿ ಮಹಿಳೆಗೆ ಹೊಡೆದಿದ್ದಾಳೆ.ನಂತರ ಆಕ್ರೋಶಭರಿತಗೊಂಡು ಮೈಮೇಲೆ ಹಾಕಿದ ಬಟ್ಟೆ ಹಿಡಿದು ಮಹಿಳೆಯರು ಎಳೆದಾಡಿಕೊಂಡಿದ್ದಾರೆ.