ಬೆಂಗಳೂರು ತಂಡಕ್ಕೆ ಸತತ ಐದನೆ ಗೆಲುವು
ಬೆಂಗಳೂರು: ರಜತ್ ಪಾಟಿದಾರ್ ಅವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್ಗಳ‌ ಅದ್ಭುತ ಪ್ರದರ್ಶನದ ನೆರವಿನಿಂದ ಆರ್ಸಿಬಿ ಡೆಲ್ಲಿ ವಿರುದ್ಧ 47 ರನ್ಗಳ ಗೆಲುವು ದಾಖಲಿಸಿದೆ. ಸತತ ಐದನೆ ಗೆಲುವಿನೊಂದಿಗೆ ಬೆಂಗಳೂರು ತಂಡ ಐದನೆ ಸ್ಥಾನಕ್ಕೇರಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 187 ರನ್ ಕಲೆ ಹಾಕಿತು. ಡೆಲ್ಲಿ ತಂಡ 19.1 ಓವರ್ಗಳಲ್ಲಿ 140 ರನ್ಗಳಿಗೆ ಸರ್ವ ಪತನ ಕಂಡಿತು.
ಡೆಲ್ಲಿ ಪರ ಡೇವಿಡ್ ವಾರ್ನರ್ 1, ಜೇಕ್ ಫ್ರೇಸರ್ 21, ಅಭಿಷೇಕ್ ಪೊರೆಲ್ 2, ಶಾಯ್ ಹೋಪ್ 29, ಕುಮಾರ್ 2, ಅಕ್ಷರ್ ಪಟೇಲ್ 57, ಸ್ಟಬ್ಸ್ 3, ರಸೀಕ್ ಸಲಾಂ 10, ಕುಲ್ದೀಪ್ 6, ಮುಕೇಶ್ 3 ರನ್ ಹೊಡೆದರು.
ಆರ್ಸಿಬಿ ಪರ ಯಶ್ ದಯಾಳ್ 20ಕ್ಕೆ 3, ಫರ್ಗೂಸನ್ 23,ಕ್ಕೆ 2, ಸ್ವಪ್ನಿಲ್ 9ಕ್ಕೆ 1. ಸಿರಾಜ್ 33ಕ್ಕೆ 1, ಕ್ಯಾಮಾರಾನ್ ಗ್ರೀನ್ 19ಕ್ಕೆ 1 ವಿಕೆಟ್ ಪಡೆದರು
ಇದಕ್ಕೂ ಮುನ್ನ ಆರ್ಸಿಬಿ ಪರ ವಿರಾಟ್ ಕೊಹ್ಲಿ 27, ಫಾಫ್ ಡುಪ್ಲೆಸಿಸ್ 6, ಜ್ಯಾಕ್ಸ್ 41 ರನ್, ರಜತ್ಪಾಟಿದಾರ್ 52, ಗ್ರೀನ್ ಅಜೇಯ 32 ರನ್ ಗಳಿಸಿದರು.
ಡೆಲ್ಲಿ ಪರ ಖಲೀಲ್ 31ಕ್ಕೆ 2, ರಸೀಕ್ 23_ ಕ್ಕೆ 2, ಇಶಾಂತ್, ಮುಕೇಶ್, ಕುಲ್ದೀಪ್ ತಲಾ 1 ವಿಕೆಟ್ ಪಡೆದರು