ಬೈಡೆನ್ ಹೇಳಿಕೆಗೆ ಹಮಾಸ್ ಬೇಸರ
ಗಾಜಾ, ಮೇ ೧೩- ಗಾಜಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ನೀಡಿರುವ ಹೇಳಿಕೆ ವಿರುದ್ಧ ಹಮಾಸ್ ಪಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಮಾತುಕತೆಗಳಿಗೆ ತೀವ್ರ ಹಿನ್ನಡೆ ತರಲಿದೆ ಎಂದು ತಿಳಿಸಿದೆ.
ಹಮಾಸ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಗಾಜಾದಲ್ಲಿ ಕದನ ವಿರಾಮ ಸಾಧ್ಯ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಈ ಹಿಂದೆ ತಿಳಿಸಿದ್ದರು. ಸದ್ಯ ಈ ಹೇಳಿಕೆಗೆ ಹಮಾಸ್ ಪಡೆ ವಿರೋಧ ವ್ಯಕ್ತಪಡಿಸಿದೆ. ಯುಎಸ್ ಅಧ್ಯಕ್ಷರ ಈ ನಿಲುವನ್ನು ನಾವು ಖಂಡಿಸುತ್ತೇವೆ, ಇದು ಇತ್ತೀಚಿನ ಸುತ್ತಿನ ಮಾತುಕತೆಗಳ ಫಲಿತಾಂಶಗಳಿಂದ ಹಿನ್ನಡೆ ಎಂದು ನಾವು ಪರಿಗಣಿಸುತ್ತೇವೆ, ಇದು ಮಧ್ಯವರ್ತಿಗಳ ಪ್ರಸ್ತಾಪಕ್ಕೆ ಚಳವಳಿಯ ಒಪ್ಪಿಗೆಗೆ ಕಾರಣವಾಯಿತು ಎಂದು ಹಮಾಸ್ ಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ ೭ರಂದು ಇಸ್ರೇಲ್ ನೆಲೆದೊಳಗೆ ನುಗ್ಗಿ ಹಲವು ನಾಗರಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡು ಹೋಗಿರುವ ನಾಗರಿಕರನ್ನು ಹಮಾಸ್ ಪಡೆ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಗಾಜಾ ನಗರದಲ್ಲಿ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಈಜಿಪ್ಟ್, ಕತಾರ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ವಿನಿಮಯ ಒಪ್ಪಂದದ ಮಾತುಕತೆ ಸದ್ಯ ಬಹುತೇತ ಅಂತ್ಯಗೊಂಡ ಸ್ಥಿತಿಯಲ್ಲಿದೆ.