ಪ್ರಜ್ವಲ್ ಹುಡುಕಿ ಕೊಟ್ಟವರಿಗೆ ೧ ಲಕ್ಷ ಬಹುಮಾನ
ಬೆಂಗಳೂರು.ಮೇ.೧೧-ಪನ್‌ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಹುಡುಕಿ ಕೊಟ್ಟವರಿಗೆ ಸಿಗಲಿದೆ ಒಂದು ಲಕ್ಷ ಬಹುಮಾನ ನೀಡಲಾಗುವುದೆಂದು ಜನತಾ ಪಾರ್ಟಿ ಘೋಷಿಸಿದೆ.
ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ಸೇರಿದಂತೆ ನಾನಾ ಕಡೆ ಜನತಾ ಪಾರ್ಟಿಯಿಂದ ವಾಂಟೆಡ್ ಪೋಸ್ಟರ್ ಅನ್ನು ಹಂಚ್ಚುತ್ತಿದ್ದಾರೆ. ಜತೆಗೆ ಪ್ರಜ್ವಲ್ ರೇವಣ್ಣನ ಹುಡುಕಿ ಕೊಟ್ಟವರಿಗೆ ಸಿಗಲಿದೆ ಒಂದು ಲಕ್ಷ ಬಹುಮಾನ ಕೊಡುವುದಾಗಿ ಪಕ್ಷದ ಕಾರ್ಯಕರ್ತ ನಾಗೇಶ್ ಅವರು ಹೇಳಿದರು.
ಪ್ರಮುಖ ರಸ್ತೆಯ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುತ್ತಿದ್ದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಗೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿಲ್ಲ, ಈ ನಿಟ್ಟಿನಲ್ಲಿ ನಾವು ಅವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಮತ್ತು ಸನ್ಮಾನ ಮಾಡುವುದಾಗಿ ನಾಗೇಶ್ ಹೇಳಿದ್ದಾರೆ.